إعدادات العرض
(ಲೌಕಿಕ ವಿಷಯಗಳಲ್ಲಿ) ನಿಮಗಿಂತ ಕೆಳಗಿರುವವರನ್ನು ನೋಡಿರಿ. ನಿಮಗಿಂತ ಮೇಲಿರುವವರನ್ನು ನೋಡಬೇಡಿರಿ. ಏಕೆಂದರೆ, ಅಲ್ಲಾಹು ನಿಮಗೆ…
(ಲೌಕಿಕ ವಿಷಯಗಳಲ್ಲಿ) ನಿಮಗಿಂತ ಕೆಳಗಿರುವವರನ್ನು ನೋಡಿರಿ. ನಿಮಗಿಂತ ಮೇಲಿರುವವರನ್ನು ನೋಡಬೇಡಿರಿ. ಏಕೆಂದರೆ, ಅಲ್ಲಾಹು ನಿಮಗೆ ನೀಡಿದ ಅನುಗ್ರಹಗಳನ್ನು ನೀವು ಕೀಳಾಗಿ ಕಾಣದಿರಲು ಇದು ಹೆಚ್ಚು ಸೂಕ್ತವಾಗಿದೆ
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "(ಲೌಕಿಕ ವಿಷಯಗಳಲ್ಲಿ) ನಿಮಗಿಂತ ಕೆಳಗಿರುವವರನ್ನು ನೋಡಿರಿ. ನಿಮಗಿಂತ ಮೇಲಿರುವವರನ್ನು ನೋಡಬೇಡಿರಿ. ಏಕೆಂದರೆ, ಅಲ್ಲಾಹು ನಿಮಗೆ ನೀಡಿದ ಅನುಗ್ರಹಗಳನ್ನು ನೀವು ಕೀಳಾಗಿ ಕಾಣದಿರಲು ಇದು ಹೆಚ್ಚು ಸೂಕ್ತವಾಗಿದೆ."
الترجمة
العربية Bosanski English Español فارسی Français Indonesia Русский Türkçe اردو 中文 हिन्दी Hausa Kurdî Tiếng Việt অসমীয়া Nederlands Kiswahili සිංහල ગુજરાતી Magyar ქართული Română Português ไทย తెలుగు मराठी دری አማርኛ বাংলা Malagasy Македонски Tagalog ភាសាខ្មែរ Українська ਪੰਜਾਬੀ پښتو Wolof Moore Svenska മലയാളം தமிழ்الشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮುಸಲ್ಮಾನನಿಗೆ ಆದೇಶಿಸುವುದೇನೆಂದರೆ, ಅವನು ಲೌಕಿಕ ವಿಷಯಗಳಲ್ಲಿ - ಸ್ಥಾನಮಾನ, ಸಂಪತ್ತು, ಪ್ರತಿಷ್ಠೆ ಇತ್ಯಾದಿಗಳಲ್ಲಿ - ತನ್ನ ಸ್ಥಿತಿಗಿಂತ ಕೆಳಗಿರುವವರನ್ನು ಮತ್ತು ಕಡಿಮೆ ಇರುವವರನ್ನು ನೋಡಬೇಕು, ಮತ್ತು ಲೌಕಿಕ ವಿಷಯಗಳಲ್ಲಿ ತನಗಿಂತ ಮೇಲಿರುವವರನ್ನು ಮತ್ತು ಉತ್ತಮ ಸ್ಥಿತಿಯಲ್ಲಿರುವವರನ್ನು ನೋಡಬಾರದು. ಏಕೆಂದರೆ, ಕೆಳಗಿರುವವರನ್ನು ನೋಡುವುದು, ಅಲ್ಲಾಹು ನಿಮಗೆ ನೀಡಿದ ಅನುಗ್ರಹವನ್ನು ನೀವು ಕೀಳಾಗಿ ಕಾಣದಿರಲು ಮತ್ತು ತಿರಸ್ಕರಿಸದಿರಲು ಹೆಚ್ಚು ಅರ್ಹ ಮತ್ತು ಸೂಕ್ತವಾಗಿದೆ.فوائد الحديث
ಸಂತೃಪ್ತಿಯು ಸತ್ಯವಿಶ್ವಾಸಿಗಳ ಅತಿಶ್ರೇಷ್ಠ ಗುಣಗಳಲ್ಲಿ ಒಂದಾಗಿದೆ. ಇದು ಅಲ್ಲಾಹುವಿನ ವಿಧಿಯನ್ನು ಒಪ್ಪಿಕೊಳ್ಳುವುದರ ಸಂಕೇತವಾಗಿದೆ.
ಇಬ್ನ್ ಜರೀರ್ ಹೇಳುತ್ತಾರೆ: "ಇದು ಅನೇಕ ರೀತಿಯ ಒಳಿತುಗಳನ್ನು ಒಳಗೊಂಡಿರುವ ಒಂದು ಸಮಗ್ರ ಹದೀಸ್ ಆಗಿದೆ. ಏಕೆಂದರೆ ಮನುಷ್ಯನು ಲೌಕಿಕ ವಿಷಯಗಳಲ್ಲಿ ತನಗಿಂತ ಶ್ರೇಷ್ಠರಾದವರನ್ನು ನೋಡಿದಾಗ, ಅವನ ಮನಸ್ಸು ಅದನ್ನೇ ಬಯಸುತ್ತದೆ. ಅಲ್ಲಾಹು ತನಗೆ ನೀಡಿದ ಅನುಗ್ರಹವನ್ನು ಅವನು ಕೀಳಾಗಿ ಕಾಣುತ್ತಾನೆ. ಅವರನ್ನು ತಲುಪಲು ಅಥವಾ ಅವರ ಸಮೀಪಕ್ಕೆ ಬರಲು ಇನ್ನಷ್ಟು ಗಳಿಸಲು ಆಸಕ್ತನಾಗುತ್ತಾನೆ. ಇದು ಹೆಚ್ಚಿನ ಜನರಲ್ಲಿ ಕಂಡುಬರುವ ಸ್ಥಿತಿಯಾಗಿದೆ. ಆದರೆ, ಅವನು ಲೌಕಿಕ ವಿಷಯಗಳಲ್ಲಿ ತನಗಿಂತ ಕೆಳಗಿರುವವರನ್ನು ನೋಡಿದಾಗ, ಅಲ್ಲಾಹು ಅವನಿಗೆ ನೀಡಿದ ಅನುಗ್ರಹವು ಅವನಿಗೆ ಸ್ಪಷ್ಟವಾಗಿ ಕಾಣುತ್ತದೆ. ಆಗ ಅವನು ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಾನೆ, ವಿನಮ್ರನಾಗುತ್ತಾನೆ ಮತ್ತು ಅದರಲ್ಲಿ ಒಳಿತನ್ನು ಮಾಡುತ್ತಾನೆ."
التصنيفات
Purification of Souls