ಖಂಡಿತವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಸಂಕೋಚದವನು ಮತ್ತು ಉದಾರನು. ದಾಸನು ತನ್ನ ಕೈಗಳನ್ನು ಅವನ ಕಡೆಗೆ ಎತ್ತಿದಾಗ ಅವುಗಳನ್ನು…

ಖಂಡಿತವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಸಂಕೋಚದವನು ಮತ್ತು ಉದಾರನು. ದಾಸನು ತನ್ನ ಕೈಗಳನ್ನು ಅವನ ಕಡೆಗೆ ಎತ್ತಿದಾಗ ಅವುಗಳನ್ನು ಖಾಲಿಯಾಗಿ ಹಿಂದಿರುಗಿಸಲು ಅವನು ಸಂಕೋಚಪಡುತ್ತಾನೆ

ಸಲ್ಮಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಸಂಕೋಚದವನು ಮತ್ತು ಉದಾರನು. ದಾಸನು ತನ್ನ ಕೈಗಳನ್ನು ಅವನ ಕಡೆಗೆ ಎತ್ತಿದಾಗ ಅವುಗಳನ್ನು ಖಾಲಿಯಾಗಿ ಹಿಂದಿರುಗಿಸಲು ಅವನು ಸಂಕೋಚಪಡುತ್ತಾನೆ."

[حسن] [رواه أبو داود والترمذي وابن ماجه]

الشرح

ಪ್ರಾರ್ಥನೆಯ ಸಮಯದಲ್ಲಿ ಕೈಗಳನ್ನು ಎತ್ತುವಂತೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರೋತ್ಸಾಹಿಸುತ್ತಿದ್ದಾರೆ. ಅವರು ತಿಳಿಸುವುದೇನೆಂದರೆ, ಪರಿಶುದ್ಧನಾದ ಅಲ್ಲಾಹನು "ಸಂಕೋಚದವನು" ಅಂದರೆ, ಬಹಳ ನಾಚಿಕೆಪಡುವವನು. ಅವನು ಕೊಡುವುದನ್ನು ನಿಲ್ಲಿಸುವುದಿಲ್ಲ. ತನ್ನ ದಾಸನಿಗೆ ಸಂತೋಷ ತರುವುದನ್ನೇ ಅವನು ಮಾಡುತ್ತಾನೆ ಮತ್ತು ತೊಂದರೆಯಾಗುವುದನ್ನು ಬಿಟ್ಟುಬಿಡುತ್ತಾನೆ. ಅವನು "ಉದಾರನು" ಅಂದರೆ, ಅವನು ಕೇಳದೆಯೇ ನೀಡುವವನು. ಹೀಗಿರುವಾಗ ಅವನಲ್ಲಿ ಏನಾದರೂ ಕೇಳಿದರೆ ಹೇಗಿರಬಹುದು! ತನ್ನ ಸತ್ಯವಿಶ್ವಾಸಿ ದಾಸನು ಪ್ರಾರ್ಥನೆಗಾಗಿ ತನ್ನ ಕೈಗಳನ್ನು ಎತ್ತಿದಾಗ, ಅವುಗಳನ್ನು ಬರಿದಾಗಿ, ಖಾಲಿಯಾಗಿ ಮತ್ತು ಉತ್ತರ ರಹಿತವಾಗಿ ಹಿಂದಿರುಗಿಸಲು ಅವನು ನಾಚಿಕೆಪಡುತ್ತಾನೆ.

فوائد الحديث

ಮನುಷ್ಯನು ಅಲ್ಲಾಹನ ಕಡೆಗೆ ತನ್ನ ಅಗತ್ಯವನ್ನು ಮತ್ತು ಆರಾಧನೆಯನ್ನು ಎಷ್ಟರ ಮಟ್ಟಿಗೆ ಹೆಚ್ಚಾಗಿ ಪ್ರದರ್ಶಿಸುತ್ತಾನೋ, ಅಷ್ಟರ ಮಟ್ಟಿಗೆ ಅವನ ಪ್ರಾರ್ಥನೆಗೆ ಉತ್ತರ ಸಿಗುವ ನಿರೀಕ್ಷೆಯಿರುತ್ತದೆ ಮತ್ತು ಉತ್ತರ ಸಿಗಲು ಹತ್ತಿರವಾಗಿರುತ್ತದೆ.

ಪ್ರಾರ್ಥಿಸುವುದನ್ನು ಪ್ರೋತ್ಸಾಹಿಸಲಾಗಿದೆ ಮತ್ತು ಪ್ರಾರ್ಥಿಸುವಾಗ ಕೈಗಳನ್ನು ಎತ್ತುವುದು ಅಪೇಕ್ಷಣೀಯವೆಂದು ಹೇಳಲಾಗಿದೆ. ಏಕೆಂದರೆ ಅದು ಪ್ರಾರ್ಥನೆಗೆ ಉತ್ತರ ಸಿಗುವ ಕಾರಣಗಳಲ್ಲಿ ಒಂದಾಗಿದೆ.

ಅಲ್ಲಾಹನಿಗೆ ತನ್ನ ದಾಸರ ಮೇಲಿರುವ ಅಪಾರವಾದ ಔದಾರ್ಯ ಮತ್ತು ಕರುಣೆಯನ್ನು ವಿವರಿಸಲಾಗಿದೆ.

التصنيفات

Manners of Supplication