ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಗ್ರವಾದ ಪ್ರಾರ್ಥನೆಗಳನ್ನು ಇಷ್ಟಪಡುತ್ತಿದ್ದರು ಮತ್ತು…

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಗ್ರವಾದ ಪ್ರಾರ್ಥನೆಗಳನ್ನು ಇಷ್ಟಪಡುತ್ತಿದ್ದರು ಮತ್ತು ಅದಕ್ಕೆ ಹೊರತಾದವುಗಳನ್ನು ಬಿಟ್ಟುಬಿಡುತ್ತಿದ್ದರು

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳುತ್ತಾರೆ: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಗ್ರವಾದ ಪ್ರಾರ್ಥನೆಗಳನ್ನು ಇಷ್ಟಪಡುತ್ತಿದ್ದರು ಮತ್ತು ಅದಕ್ಕೆ ಹೊರತಾದವುಗಳನ್ನು ಬಿಟ್ಟುಬಿಡುತ್ತಿದ್ದರು."

[صحيح] [رواه أبو داود وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಹಲೋಕ ಮತ್ತು ಪರಲೋಕದ ಒಳಿತಿಗಾಗಿರುವ ಸಮಗ್ರವಾದ ಪ್ರಾರ್ಥನೆಗಳನ್ನು ಇಷ್ಟಪಡುತ್ತಿದ್ದರು. ಅವು ಕಡಿಮೆ ಪದಗಳನ್ನು ಹೊಂದಿರುವ ಮತ್ತು ವಿಶಾಲ ಅರ್ಥವನ್ನು ಒಳಗೊಂಡಿರುವ ಪ್ರಾರ್ಥನೆಗಳಾಗಿದ್ದವು. ಅವುಗಳಲ್ಲಿ ಅಲ್ಲಾಹನ ಸ್ತುತಿ ಮತ್ತು ಒಳಿತುಗಳ ಬೇಡಿಕೆ ಇರುತ್ತಿದ್ದವು. ಇದಲ್ಲದ ಇತರ ಪ್ರಾರ್ಥನೆಗಳನ್ನು ಅವರು ಪ್ರಾರ್ಥಿಸುತ್ತಿರಲಿಲ್ಲ.

فوائد الحديث

ಒಳಿತಿನ ಅರ್ಥಗಳನ್ನು ಒಳಗೊಂಡಿರುವ ಸರಳ ಮತ್ತು ಸಮಗ್ರವಾದ ಪದಗಳಿಂದ ಪ್ರಾರ್ಥಿಸುವುದು ಅಪೇಕ್ಷಣೀಯವಾಗಿದೆ. ಪ್ರಾರ್ಥನೆಯಲ್ಲಿ ಕಷ್ಟಕರ ಪದಗಳು ಮತ್ತು ಉದ್ದಕ್ಕೆ ಎಳೆಯುವ ಪ್ರಯತ್ನವು ಅಸಹ್ಯಕರ (ಕರಾಹತ್) ಆಗಿದೆ. ಇದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಚರ್ಯೆಗೆ ವಿರುದ್ಧವಾಗಿದೆ.

ಅಲ್ಲಾಹನ ಸಂದೇಶವಾಹಕರಿಗೆ () ಸಮಗ್ರವಾಗಿ ಮತ್ತು ಅರ್ಥಪೂರ್ಣವಾಗಿ ಮಾತನಾಡುವ ವಿಶೇಷತೆಯನ್ನು ಕರುಣಿಸಲಾಗಿದೆ.

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥಿಸಿದ್ದಾರೆಂದು ದೃಢಪಟ್ಟಿರುವ ಪ್ರಾರ್ಥನೆಗಳನ್ನು ಪ್ರಾರ್ಥಿಸಲು ಉತ್ಸಾಹ ತೋರಬೇಕು. ಅವು ದೀರ್ಘವಾಗಿದ್ದರೂ ಮತ್ತು ಅವುಗಳಲ್ಲಿ ಹೆಚ್ಚಿನ ಪದಗಳಿದ್ದರೂ ಸಹ. ಏಕೆಂದರೆ, ಅವೆಲ್ಲವೂ ಸಮಗ್ರವಾದ ಪ್ರಾರ್ಥನೆಗಳಾಗಿವೆ.

التصنيفات

Manners of Supplication