إعدادات العرض
ಆಣೆ ಮಾಡುವುದು ಸರಕುಗಳನ್ನು ಮಾರಾಟ ಮಾಡಲು ಉಪಯುಕ್ತವಾಗಿದೆ. ಆದರೆ, ಅದು ಲಾಭವನ್ನು ನಾಶಪಡಿಸುತ್ತದೆ
ಆಣೆ ಮಾಡುವುದು ಸರಕುಗಳನ್ನು ಮಾರಾಟ ಮಾಡಲು ಉಪಯುಕ್ತವಾಗಿದೆ. ಆದರೆ, ಅದು ಲಾಭವನ್ನು ನಾಶಪಡಿಸುತ್ತದೆ
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಆಣೆ ಮಾಡುವುದು ಸರಕುಗಳನ್ನು ಮಾರಾಟ ಮಾಡಲು ಉಪಯುಕ್ತವಾಗಿದೆ. ಆದರೆ, ಅದು ಲಾಭವನ್ನು ನಾಶಪಡಿಸುತ್ತದೆ."
الترجمة
العربية Bosanski English Español فارسی Français Bahasa Indonesia Русский اردو 中文 हिन्दी Hausa Kurdî Português සිංහල Kiswahili অসমীয়া Tiếng Việt ગુજરાતી Nederlands മലയാളം Română Magyar ქართული मराठी Moore ไทย Македонски తెలుగు Українська ਪੰਜਾਬੀ دری አማርኛ বাংলা Malagasy Tagalog ភាសាខ្មែរالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಣೆ ಮಾಡುವುದರ ಮತ್ತು ಅದನ್ನು ಹೆಚ್ಚಾಗಿ ಬಳಸುವುದರ ವಿರುದ್ಧ ಎಚ್ಚರಿಸಿದ್ದಾರೆ. ಆತ ಮಾರಾಟ ಖರೀದಿ ಮಾಡುವುದರಲ್ಲಿ ಸತ್ಯವಂತನಾಗಿದ್ದರೂ ಸಹ. ಸರಕು ಮತ್ತು ವಸ್ತುಗಳ ಮಾರಾಟವು ಹೆಚ್ಚಾಗಲು ಅದು ಕಾರಣವಾಗುತ್ತದೆ, ಆದರೆ ಅದು ಲಾಭ ಮತ್ತು ಗಳಿಕೆಯ ಸಮೃದ್ಧಿಯನ್ನು (ಬರಕತ್ತನ್ನು) ಕಡಿಮೆ ಮಾಡುತ್ತದೆ ಮತ್ತು ನಾಶಪಡಿಸುತ್ತದೆ ಎಂದು ಅವರು ತಿಳಿಸಿದರು. ಅವನು ಗಳಿಸಿದ್ದನ್ನು ನಾಶ ಮಾಡಲು ಅಲ್ಲಾಹು ವಿವಿಧ ಕಾರಣಗಳನ್ನು ಉಂಟುಮಾಡಬಹುದು. ಕಳ್ಳತನ, ಅಗ್ನಿದುರಂತ, ಪ್ರವಾಹ, ಬಲವಂತದ ವಶಪಡಿಸುವಿಕೆ, ದರೋಡೆ ಅಥವಾ ಇತರ ಕಾರಣಗಳಿಂದ ಅಲ್ಲಾಹು ಅವನ ಆಸ್ತಿಯನ್ನು ನಾಶಪಡಿಸಬಹುದು.فوائد الحديث
ಅಲ್ಲಾಹನ ಹೆಸರಿನಲ್ಲಿ ಆಣೆ ಮಾಡುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಮತ್ತು ಅಗತ್ಯವಿದ್ದಾಗ ಮಾತ್ರ ಆಣೆ ಮಾಡಬೇಕೆಂದು ತಿಳಿಸಲಾಗಿದೆ.
ಹರಾಮ್ (ನಿಷಿದ್ಧ) ಗಳಿಕೆಯು, ಅದು ಎಷ್ಟೇ ದೊಡ್ಡ ಪ್ರಮಾಣದಲ್ಲಿದ್ದರೂ ಸಹ, ಅದರಲ್ಲಿ ಸಮೃದ್ಧಿ (ಬರಕತ್) ಮತ್ತು ಒಳಿತು ಇರುವುದಿಲ್ಲ.
ಖಾರಿ ಹೇಳುತ್ತಾರೆ: "ಗಳಿಸಿದ ಸಂಪತ್ತಿನ ಸಮೃದ್ಧಿ (ಬರಕತ್) ನಾಶವಾಗುವುದು ಹೇಗೆಂದರೆ; ಒಂದೋ ಅವನ ಆಸ್ತಿಯಲ್ಲಿ ಹಾನಿ ಸಂಭವಿಸುವುದರಿಂದ, ಅಥವಾ ಇಹಲೋಕದಲ್ಲಿ ಅವನಿಗೆ ಯಾವುದೇ ಪ್ರಯೋಜನ ನೀಡದ ಅಥವಾ ಪರಲೋಕದಲ್ಲಿ ಪ್ರತಿಫಲವನ್ನು ನೀಡದ ವಿಷಯಗಳಿಗಾಗಿ ಅದನ್ನು ಖರ್ಚು ಮಾಡುವಂತೆ ಮಾಡುವುದರಿಂದ, ಅಥವಾ ಅದು ಅವನ ಬಳಿ ಇದ್ದರೂ ಅದರ ಪ್ರಯೋಜನ ಪಡೆಯಲು ಅವನಿಗೆ ಸಾಧ್ಯವಾಗದೆ ಇರುವುದರಿಂದ, ಅಥವಾ ಅವನಿಗೆ ಇಷ್ಟವಿಲ್ಲದವರು ಅದನ್ನು ಉತ್ತರಾಧಿಕಾರವಾಗಿ ಪಡೆಯುವುದರಿಂದ."
ಇಮಾಮ್ ನವವಿ ಹೇಳುತ್ತಾರೆ: "ವ್ಯಾಪಾರದಲ್ಲಿ ಹೆಚ್ಚಾಗಿ ಆಣೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಇದರಲ್ಲಿ ಸೂಚಿಸಲಾಗಿದೆ. ಏಕೆಂದರೆ, ಯಾವುದೇ ಅಗತ್ಯವಿಲ್ಲದೆ ಆಣೆ ಮಾಡುವುದು ಅಸಹ್ಯಕರ (ಕರಾಹತ್) ಆಗಿದೆ. ಅಷ್ಟೇ ಅಲ್ಲದೆ, ಅದು ಸರಕುಗಳ ಮಾರಾಟವನ್ನು ಉತ್ತೇಜಿಸುತ್ತದೆ, ಮತ್ತು ಕೆಲವೊಮ್ಮೆ ಗ್ರಾಹಕನು ಆ ಆಣೆಯಿಂದಾಗಿ ಮೋಸಹೋಗಬಹುದು."
ಅತಿಯಾಗಿ ಆಣೆ ಮಾಡುವುದು ಸತ್ಯವಿಶ್ವಾಸದಲ್ಲಿ (ಈಮಾನ್) ಮತ್ತು ಏಕದೇವತ್ವದಲ್ಲಿ (ತೌಹೀದ್) ಕೊರತೆಯನ್ನು ಉಂಟುಮಾಡುತ್ತದೆ. ಏಕೆಂದರೆ, ಅತಿಯಾಗಿ ಆಣೆ ಮಾಡುವುದು ಎರಡು ವಿಷಯಗಳಿಗೆ ಕಾರಣವಾಗುತ್ತದೆ: ಒಂದು: ಅದರಲ್ಲಿ ನಿರ್ಲಕ್ಷ್ಯ ತಾಳುವುದು ಮತ್ತು ಗಂಭೀರವಾಗಿ ಪರಿಗಣಿಸದಿರುವುದು. ಎರಡನೆಯದು: ಸುಳ್ಳು. ಏಕೆಂದರೆ, ಅತಿಯಾಗಿ ಆಣೆ ಮಾಡುವವರು ಸುಳ್ಳು ಹೇಳುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಅದನ್ನು ಕಡಿಮೆ ಮಾಡಬೇಕು ಮತ್ತು ಅತಿಯಾಗಿ ಆಣೆ ಮಾಡಬಾರದು. ಈ ಕಾರಣದಿಂದಲೇ ಅಲ್ಲಾಹು ಹೇಳುತ್ತಾನೆ: "ಮತ್ತು ನಿಮ್ಮ ಆಣೆಗಳನ್ನು ಸಂರಕ್ಷಿಸಿರಿ." [ಮಾಯಿದಾ: 89].