ಮೂರ್ತಿಗಳ ಮೇಲೆ ಅಥವಾ ನಿಮ್ಮ ಪೂರ್ವಜರ ಮೇಲೆ ಆಣೆ ಮಾಡಬೇಡಿ

ಮೂರ್ತಿಗಳ ಮೇಲೆ ಅಥವಾ ನಿಮ್ಮ ಪೂರ್ವಜರ ಮೇಲೆ ಆಣೆ ಮಾಡಬೇಡಿ

ಅಬ್ದುರ್‍ರಹ್ಮಾನ್ ಬಿನ್ ಸಮುರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮೂರ್ತಿಗಳ ಮೇಲೆ ಅಥವಾ ನಿಮ್ಮ ಪೂರ್ವಜರ ಮೇಲೆ ಆಣೆ ಮಾಡಬೇಡಿ."

[صحيح] [رواه مسلم]

الشرح

ಮೂರ್ತಿಗಳ ಮೇಲೆ ಆಣೆ ಮಾಡುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ನಿಷೇಧಿಸಿದ್ದಾರೆ. ಮೂರ್ತಿಗಳು ಎಂದರೆ ಬಹುದೇವವಿಶ್ವಾಸಿಗಳು ಅಲ್ಲಾಹನ ಹೊರತಾಗಿ ಆರಾಧಿಸುವ ವಿಗ್ರಹಗಳು. ಅವರ ಅತಿರೇಕ ಮತ್ತು ಸತ್ಯನಿಷೇಧಕ್ಕೆ ಇವುಗಳೇ ಕಾರಣ. ಅದೇ ರೀತಿ ಪೂರ್ವಜರ ಮೇಲೆ ಆಣೆ ಮಾಡುವುದನ್ನು ಕೂಡ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ. ಏಕೆಂದರೆ, ಅಜ್ಞಾನಕಾಲದಲ್ಲಿ ಜಂಭ ಮತ್ತು ದೊಡ್ಡಸ್ಥಿಕೆಯಿಂದ ತಮ್ಮ ಪೂರ್ವಜರ ಮೇಲೆ ಆಣೆ ಮಾಡುವುದು ಅರಬ್ಬರ ವಾಡಿಕೆಯಾಗಿತ್ತು.

فوائد الحديث

ಅಲ್ಲಾಹನ ಮೇಲೆ, ಅವನ ಹೆಸರು ಹಾಗೂ ಗುಣಲಕ್ಷಣಗಳ ಮೇಲೆ ಮಾತ್ರ ಆಣೆ ಮಾಡಬೇಕು.

ಮೂರ್ತಿಗಳು, ಪೂರ್ವಜರು, ಮುಖಂಡರು, ವಿಗ್ರಹಗಳು ಮತ್ತು ಅವುಗಳನ್ನು ಹೋಲುವ ಮಿಥ್ಯವಸ್ತುಗಳ ಮೇಲೆ ಆಣೆ ಮಾಡುವುದನ್ನು ನಿಷೇಧಿಸಲಾಗಿದೆ.

ಅಲ್ಲಾಹೇತರರ ಮೇಲೆ ಆಣೆ ಮಾಡುವುದು ಸಣ್ಣ ಶಿರ್ಕ್ (ದೇವಸಹಭಾಗಿತ್ವ) ಆಗಿದೆ. ಕೆಲವೊಮ್ಮೆ ಇದು ದೊಡ್ಡ ಶಿರ್ಕ್ ಆಗಬಹುದು. ಅಂದರೆ, ಆಣೆ ಮಾಡುವವನ ಹೃದಯದಲ್ಲಿ ಆಣೆ ಮಾಡಲಾಗುವವರ ಬಗ್ಗೆ ಗೌರವಭಾವನೆಯಿದ್ದರೆ, ಅಥವಾ ಅಲ್ಲಾಹನಷ್ಟೇ ಅವರಿಗೂ ಗೌರವ ನೀಡಿದರೆ, ಅಥವಾ ಅವರ ಬಗ್ಗೆ ಆರಾಧನಾ ಭಾವವಿದ್ದರೆ ಅದು ದೊಡ್ಡ ಶಿರ್ಕ್ ಆಗುತ್ತದೆ.

التصنيفات

Oneness of Allah's Worship