ಕುರ್‌ಆನ್‌ನಲ್ಲಿ ಪರಿಣಿತನಾದವನು ಗೌರವಾನ್ವಿತ, ವಿಧೇಯ ಬರಹಗಾರರೊಂದಿಗೆ (ದೇವದೂತರು) ಇರುವನು. ಯಾರು ಕುರ್‌ಆನ್ ಓದುವಾಗ ಅದರಲ್ಲಿ…

ಕುರ್‌ಆನ್‌ನಲ್ಲಿ ಪರಿಣಿತನಾದವನು ಗೌರವಾನ್ವಿತ, ವಿಧೇಯ ಬರಹಗಾರರೊಂದಿಗೆ (ದೇವದೂತರು) ಇರುವನು. ಯಾರು ಕುರ್‌ಆನ್ ಓದುವಾಗ ಅದರಲ್ಲಿ ತಡವರಿಸುತ್ತಾನೋ, ಮತ್ತು ಅದು ಅವನಿಗೆ ಕಷ್ಟಕರವಾಗಿದೆಯೋ, ಅವನಿಗೆ ಎರಡು ಪ್ರತಿಫಲಗಳಿವೆ

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕುರ್‌ಆನ್‌ನಲ್ಲಿ ಪರಿಣಿತನಾದವನು ಗೌರವಾನ್ವಿತ, ವಿಧೇಯ ಬರಹಗಾರರೊಂದಿಗೆ (ದೇವದೂತರು) ಇರುವನು. ಯಾರು ಕುರ್‌ಆನ್ ಓದುವಾಗ ಅದರಲ್ಲಿ ತಡವರಿಸುತ್ತಾನೋ, ಮತ್ತು ಅದು ಅವನಿಗೆ ಕಷ್ಟಕರವಾಗಿದೆಯೋ, ಅವನಿಗೆ ಎರಡು ಪ್ರತಿಫಲಗಳಿವೆ".

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಯಾರು ಕುರ್‌ಆನ್ ಓದುತ್ತಾರೋ, ಮತ್ತು ಅವರು ಅದನ್ನು ಚೆನ್ನಾಗಿ ಕಂಠಪಾಠ ಮಾಡಿ ಅದರಲ್ಲಿ ಪ್ರವೀಣರಾಗಿರುತ್ತಾರೋ, ಮತ್ತು ಅದರ ಪಠಣದಲ್ಲಿ ಪರಿಣಿತರಾಗಿರುತ್ತಾರೋ, ಅವರಿಗೆ ಪರಲೋಕದಲ್ಲಿ ಗೌರವಾನ್ವಿತ, ವಿಧೇಯ ಬರಹಗಾರರಾದ ಮಲಕ್‌ಗಳೊಂದಿಗೆ ಸ್ಥಾನಮಾನವಿರುತ್ತದೆ. ಯಾರು ಕುರ್‌ಆನ್ ಓದುತ್ತಾರೋ ಮತ್ತು ತಮ್ಮ ದುರ್ಬಲ ಕಂಠಪಾಠದ ಕಾರಣ ಅದರಲ್ಲಿ ತಡವರಿಸುತ್ತಾರೋ ಮತ್ತು ಹಿಂಜರಿಯುತ್ತಾರೋ; ಆದರೂ ಅವರು ಅದನ್ನು ಅಭ್ಯಸಿಸುತ್ತಾರೋ, ಮತ್ತು ಅದು ಅವರಿಗೆ ತೀವ್ರ ಮತ್ತು ಕಷ್ಟಕರವಾಗಿದೆಯೋ, ಅವರಿಗೆ ಎರಡು ಪ್ರತಿಫಲಗಳಿವೆ. ಒಂದು ಪಠಣಕ್ಕಾಗಿ ಮತ್ತು ಇನ್ನೊಂದು ಕಷ್ಟಕ್ಕಾಗಿ ಮತ್ತು ಪಠಣದಲ್ಲಿನ ಅವರ ಹಿಂಜರಿಕೆಗಾಗಿ.

فوائد الحديث

ಪ್ರತಿಫಲ ಮತ್ತು ಪುಣ್ಯವನ್ನು ಗಳಿಸಲು ಕುರ್‌ಆನ್ ಅನ್ನು ಕಂಠಪಾಠ ಮಾಡಲು, ಅದರಲ್ಲಿ ಪ್ರಾವೀಣ್ಯತೆ ಪಡೆಯಲು ಮತ್ತು ಅದನ್ನು ಹೆಚ್ಚಾಗಿ ಪಠಿಸಲು ಪ್ರೋತ್ಸಾಹಿಸಲಾಗಿದೆ ಮತ್ತು ಹಾಗೆ ಮಾಡಿದವರ ಉನ್ನತ ಸ್ಥಾನಮಾನವನ್ನು ವಿವರಿಸಲಾಗಿದೆ.

ಖಾದಿ ಇಯಾದ್ ಹೇಳುತ್ತಾರೆ: "ಇದರರ್ಥ ತಡವರಿಸುವವನಿಗೆ ಪ್ರವೀಣನಿಗಿಂತ ಹೆಚ್ಚು ಪ್ರತಿಫಲವಿದೆ ಎಂದಲ್ಲ, ಬದಲಿಗೆ ಪ್ರವೀಣನು ಉತ್ತಮನು ಮತ್ತು ಹೆಚ್ಚು ಪ್ರತಿಫಲವನ್ನು ಪಡೆಯುತ್ತಾನೆ. ಏಕೆಂದರೆ ಅವನು 'ಸಫರ' (ಬರಹಗಾರ ದೇವದೂತರು) ರೊಂದಿಗೆ ಇರುತ್ತಾನೆ ಮತ್ತು ಅವನಿಗೆ ಅನೇಕ ಪ್ರತಿಫಲಗಳಿವೆ. ಈ ಸ್ಥಾನಮಾನವು ಬೇರೆಯವರಿಗೆ ಇದೆಯೆಂದು ಹೇಳಲಾಗಿಲ್ಲ. ಅಲ್ಲಾಹನ ಗ್ರಂಥದ ಬಗ್ಗೆ ಕಾಳಜಿ ವಹಿಸದೆ, ಅದನ್ನು ಕಂಠಪಾಠ ಮಾಡದೆ, ಅದರಲ್ಲಿ ಪ್ರಾವೀಣ್ಯತೆ ಪಡೆಯದೆ, ಅದನ್ನು ಹೆಚ್ಚಾಗಿ ಪಠಿಸದೆ ಮತ್ತು ಅದರ ಜ್ಞಾನವನ್ನು ಪಡೆಯದೆ ಇರುವವನು, ಅದರಲ್ಲಿ ಪ್ರಾವೀಣ್ಯತೆ ಹೊಂದುವವರೆಗೆ ಕಾಳಜಿ ವಹಿಸಿದವನಿಗೆ ಹೇಗೆ ಸಮನಾಗಲು ಸಾಧ್ಯ?"

ಇಬ್ನ್ ಬಾಝ್ ಹೇಳುತ್ತಾರೆ: "ಕುರ್‌ಆನ್‌ನಲ್ಲಿ ಪ್ರವೀಣನಾಗಿರುವವನು, ಅದರ ಪಠಣವನ್ನು ಚೆನ್ನಾಗಿ ಮಾಡುವವನು, ಅದನ್ನು ಚೆನ್ನಾಗಿ ಕಂಠಪಾಠ ಮಾಡಿದವನು 'ಸಫರತಿಲ್ ಕಿರಾಮಿಲ್ ಬರರ' ರೊಂದಿಗೆ ಇರುತ್ತಾನೆ, ಅಂದರೆ, ಅವನು ಅದನ್ನು ಮಾತು ಮತ್ತು ಕ್ರಿಯೆಯಲ್ಲಿ ಪಠಿಸಿದರೆ ಮಾತ್ರ. ಕೇವಲ ಪಠಣ ಮಾತ್ರವಲ್ಲ. ಅವನು ಅದರ ಪಠಣವನ್ನು ಚೆನ್ನಾಗಿ ಮಾಡುತ್ತಾನೆ, ಮತ್ತು ಅದರಂತೆ ಕಾರ್ಯನಿರ್ವಹಿಸುತ್ತಾನೆ. ಅವನು ಶಬ್ದಾರ್ಥ ಮತ್ತು ಭಾವಾರ್ಥ ಎರಡರಲ್ಲೂ ಅದರಂತೆ ಕಾರ್ಯನಿರ್ವಹಿಸುತ್ತಾನೆ."

التصنيفات

Merit of Taking Care of the Qur'an, Merits of the Noble Qur'an