ಬದ್ರ್ (ಯುದ್ಧ) ದಲ್ಲಿ ಮತ್ತು ಹುದೈಬಿಯ್ಯ (ಒಪ್ಪಂದ) ದಲ್ಲಿ ಭಾಗವಹಿಸಿದ ವ್ಯಕ್ತಿಯು ಖಂಡಿತವಾಗಿಯೂ ನರಕವನ್ನು ಪ್ರವೇಶಿಸುವುದಿಲ್ಲ

ಬದ್ರ್ (ಯುದ್ಧ) ದಲ್ಲಿ ಮತ್ತು ಹುದೈಬಿಯ್ಯ (ಒಪ್ಪಂದ) ದಲ್ಲಿ ಭಾಗವಹಿಸಿದ ವ್ಯಕ್ತಿಯು ಖಂಡಿತವಾಗಿಯೂ ನರಕವನ್ನು ಪ್ರವೇಶಿಸುವುದಿಲ್ಲ

ಜಾಬಿರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಬದ್ರ್ (ಯುದ್ಧ) ದಲ್ಲಿ ಮತ್ತು ಹುದೈಬಿಯ್ಯ (ಒಪ್ಪಂದ) ದಲ್ಲಿ ಭಾಗವಹಿಸಿದ ವ್ಯಕ್ತಿಯು ಖಂಡಿತವಾಗಿಯೂ ನರಕವನ್ನು ಪ್ರವೇಶಿಸುವುದಿಲ್ಲ".

[صحيح] [رواه أحمد وأصله في صحيح مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಹಿಜರಿ ಎರಡನೇ ವರ್ಷದಲ್ಲಿ ನಡೆದ ಬದ್ರ್ ಯುದ್ಧದಲ್ಲಿ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೋರಾಡಿದವರಾಗಲಿ, ಅಥವಾ ಹಿಜರಿ ಆರನೇ ವರ್ಷದಲ್ಲಿ ನಡೆದ ಹುದೈಬಿಯ್ಯ ಒಪ್ಪಂದ – ಇದರಲ್ಲಿ 'ಬೈಅತು ರ್ರಿದ್ವಾನ್' ಸಹ ಸೇರಿದೆ – ದಲ್ಲಿ ಹಾಜರಿದ್ದವರಾಗಲಿ ನರಕವನ್ನು ಪ್ರವೇಶಿಸುವುದಿಲ್ಲ.

فوائد الحديث

ಬದ್ರ್ ಮತ್ತು ಹುದೈಬಿಯ್ಯದಲ್ಲಿ ಭಾಗವಹಿಸಿದವರಿಗೆ ಶ್ರೇಷ್ಠತೆಯಿದೆ, ಮತ್ತು ಅವರು ನರಕವನ್ನು ಪ್ರವೇಶಿಸುವುದಿಲ್ಲ ಎಂಬುದು ಖಾತ್ರಿಯಾಗಿದೆ ಎಂದು ಇದರಲ್ಲಿ ತಿಳಿಸಲಾಗಿದೆ.

ಅಲ್ಲಾಹು ಅವರಿಂದ (ಇತರರಿಗೆ) ಆಗಿರಬಹುದಾದ ಅನ್ಯಾಯಗಳಿಗೆ ಹೊಣೆಗಾರನಾಗುತ್ತಾನೆ (ಅಂದರೆ, ಅವನು ಅವುಗಳನ್ನು ಪರಿಹರಿಸುತ್ತಾನೆ), ಅವರಿಗೆ ಈಮಾನ್ (ವಿಶ್ವಾಸ) ದ ಮೇಲೆ ಮರಣ ಹೊಂದುವ ಸೌಭಾಗ್ಯವನ್ನು ನೀಡುತ್ತಾನೆ, ಮತ್ತು ನರಕದ ಶಿಕ್ಷೆಯನ್ನು ಅನುಭವಿಸುವ ಮೊದಲೇ ಅವರನ್ನು ಸ್ವರ್ಗಕ್ಕೆ ಸೇರಿಸುತ್ತಾನೆ ಎಂದು ವಿವರಿಸಲಾಗಿದೆ. ಇದು ಅಲ್ಲಾಹನ ಅನುಗ್ರಹವಾಗಿದೆ. ಅವನು ತಾನಿಚ್ಛಿಸಿದವರಿಗೆ ಅದನ್ನು ನೀಡುತ್ತಾನೆ. ಅಲ್ಲಾಹು ಮಹಾನ್ ಅನುಗ್ರಹಪೂರ್ಣನಾಗಿದ್ದಾನೆ.

التصنيفات

Merit of the Companions, Degrees of the Companions, Merits of the Companions