ಅತಿಯಾಗಿ ಶಾಪ ಹಾಕುವವರು ಪುನರುತ್ಥಾನ ದಿನದಂದು ಸಾಕ್ಷಿಗಳು ಅಥವಾ ಶಿಫಾರಸ್ಸು ಮಾಡುವವರು ಆಗುವುದಿಲ್ಲ

ಅತಿಯಾಗಿ ಶಾಪ ಹಾಕುವವರು ಪುನರುತ್ಥಾನ ದಿನದಂದು ಸಾಕ್ಷಿಗಳು ಅಥವಾ ಶಿಫಾರಸ್ಸು ಮಾಡುವವರು ಆಗುವುದಿಲ್ಲ

ಅಬೂ ದರ್ದಾಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಅತಿಯಾಗಿ ಶಾಪ ಹಾಕುವವರು ಪುನರುತ್ಥಾನ ದಿನದಂದು ಸಾಕ್ಷಿಗಳು ಅಥವಾ ಶಿಫಾರಸ್ಸು ಮಾಡುವವರು ಆಗುವುದಿಲ್ಲ."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಶಾಪಕ್ಕೆ ಅರ್ಹರಲ್ಲದವರ ಮೇಲೆ ಯಾರು ಅತಿಯಾಗಿ ಶಾಪ ಹಾಕುತ್ತಾರೋ ಅವರು ಎರಡು ಶಿಕ್ಷೆಗಳಿಗೆ ಅರ್ಹರಾಗುತ್ತಾರೆ: ಮೊದಲನೆಯದು: ಅವರು ಪುನರುತ್ಥಾನ ದಿನದಂದು ಪ್ರವಾದಿಗಳು ತಮ್ಮ ಸಂದೇಶಗಳನ್ನು ತಲುಪಿಸಿದ ಬಗ್ಗೆ ಸಮುದಾಯಗಳ ಮೇಲೆ ಸಾಕ್ಷಿಯಾಗುವುದಿಲ್ಲ. ಅವರ ದುಷ್ಟತನದಿಂದಾಗಿ ಇಹಲೋಕದಲ್ಲಿ ಅವರ ಸಾಕ್ಷ್ಯವು ಸ್ವೀಕರಿಸಲ್ಪಡುವುದಿಲ್ಲ. ಅವರಿಗೆ ಅಲ್ಲಾಹನ ಮಾರ್ಗದಲ್ಲಿ ಹುತಾತ್ಮರಾಗುವ ಶಹೀದ್ ಪದವಿಯನ್ನು ನೀಡಲಾಗುವುದಿಲ್ಲ. ಎರಡನೆಯದು: ಪುನರುತ್ಥಾನ ದಿನದಂದು ನರಕಕ್ಕೆ ಅರ್ಹರಾದ ತಮ್ಮ ಸಹೋದರರಿಗಾಗಿ ಸತ್ಯವಿಶ್ವಾಸಿಗಳು ಶಿಫಾರಸ್ಸು ಮಾಡುವಾಗ ಇವರಿಗೆ ಶಿಫಾರಸ್ಸು ಮಾಡುವ ಅಧಿಕಾರವಿರುವುದಿಲ್ಲ.

فوائد الحديث

ಶಾಪ ಹಾಕುವುದನ್ನು ನಿಷೇಧಿಸಲಾಗಿದೆ ಮತ್ತು ಅದರ ಅತಿಯಾದ ಬಳಕೆಯು ಮಹಾಪಾಪಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ.

ಹದೀಸ್‌ನಲ್ಲಿ ಉಲ್ಲೇಖಿಸಿರುವ ಶಿಕ್ಷೆಯು ಅತಿಯಾಗಿ ಶಾಪ ಹಾಕುವವರಿಗೆ ಮಾತ್ರ ಅನ್ವಯವಾಗುತ್ತದೆಯೇ ವಿನಾ ಒಂದೆರಡು ಬಾರಿ ಶಾಪ ಹಾಕುವವರಿಗಲ್ಲ. ಮಾತ್ರವಲ್ಲ, ಶಾಪಗಳಲ್ಲಿ ಅನುಮತಿಸಲಾದವುಗಳೂ ಇವೆ. ಅಂದರೆ ಶರೀಅತ್‌ನಲ್ಲಿ ಉಲ್ಲೇಖಿಸಲಾದ ಕೆಟ್ಟ ಗುಣಗಳನ್ನು ಹೊಂದಿರುವವರನ್ನು ನಿರ್ದಿಷ್ಟವಾಗಿ ಅವರ ಹೆಸರು ಹೇಳದೆ ಶಾಪ ಹಾಕುವುದು. ಉದಾಹರಣೆಗೆ: "ಅಲ್ಲಾಹು ಯಹೂದಿಗಳನ್ನು ಮತ್ತು ಕ್ರೈಸ್ತರನ್ನು ಶಪಿಸಲಿ", "ಅನ್ಯಾಯ ಮಾಡುವವರ ಮೇಲೆ ಅಲ್ಲಾಹನ ಶಾಪವಿರಲಿ", "ಚಿತ್ರಗಳನ್ನು ರಚಿಸುವವರನ್ನು ಅಲ್ಲಾಹು ಶಪಿಸಲಿ", "ಲೂತ್ ಜನಾಂಗದವರ ಕೆಲಸವನ್ನು (ಸಲಿಂಗಕಾಮ) ಮಾಡಿದವರನ್ನು ಅಲ್ಲಾಹು ಶಪಿಸಲಿ", "ಅಲ್ಲಾಹನ ಹೊರತಾದವರಿಗೆ ಬಲಿ ಅರ್ಪಿಸುವವರನ್ನು ಅಲ್ಲಾಹನು ಶಪಿಸಲಿ", "ಸ್ತ್ರೀಯರನ್ನು ಅನುಕರಿಸುವ ಪುರುಷರನ್ನು ಮತ್ತು ಪುರುಷರನ್ನು ಅನುಕರಿಸುವ ಸ್ತ್ರೀಯರನ್ನು ಅಲ್ಲಾಹನು ಶಪಿಸಲಿ" ಇತ್ಯಾದಿ.

ಪುನರುತ್ಥಾನ ದಿನದಂದು ಸತ್ಯವಿಶ್ವಾಸಿಗಳು ಶಿಫಾರಸ್ಸು ಮಾಡುತ್ತಾರೆಂದು ದೃಢೀಕರಿಸಲಾಗಿದೆ.

التصنيفات

Blameworthy Morals