إعدادات العرض
ನನ್ನ ಈ ಪಾದರಕ್ಷೆಗಳೊಂದಿಗೆ ಹೋಗಿರಿ. ಈ ತೋಟದ ಗೋಡೆಯ ಆಚೆ, 'ಲಾ ಇಲಾಹ ಇಲ್ಲಲ್ಲಾಹ್' (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ…
ನನ್ನ ಈ ಪಾದರಕ್ಷೆಗಳೊಂದಿಗೆ ಹೋಗಿರಿ. ಈ ತೋಟದ ಗೋಡೆಯ ಆಚೆ, 'ಲಾ ಇಲಾಹ ಇಲ್ಲಲ್ಲಾಹ್' (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯನಿಲ್ಲ) ಎಂದು ಅದರ ಬಗ್ಗೆ ತನ್ನ ಹೃದಯದಲ್ಲಿ ದೃಢ ವಿಶ್ವಾಸವುಳ್ಳವನಾಗಿ ಸಾಕ್ಷಿ ನುಡಿಯುವ ಯಾರನ್ನಾದರೂ ನೀವು ಭೇಟಿಯಾದರೆ, ಅವನಿಗೆ ಸ್ವರ್ಗದ ಶುಭವಾರ್ತೆ ನೀಡಿರಿ
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸುತ್ತಲೂ ಕುಳಿತಿದ್ದೆವು. ನಮ್ಮೊಂದಿಗೆ ಅಬೂ ಬಕ್ರ್ ಮತ್ತು ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಸೇರಿ ಕೆಲವು ಸಹಾಬಿಗಳು ಇದ್ದರು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ಮಧ್ಯದಿಂದ ಎದ್ದು ಹೋದರು, ಮತ್ತು ಹಿಂತಿರುಗಲು ತಡಮಾಡಿದರು. ನಮ್ಮಿಂದ ಬೇರ್ಪಟ್ಟ ಅವರಿಗೆ (ಶತ್ರುಗಳಿಂದ) ಹಾನಿಯಾಗಬಹುದೆಂದು ನಾವು ಭಯಪಟ್ಟೆವು. ನಮಗೆ ಗಾಬರಿಯಾಯಿತು. ನಾವು ಎದ್ದು ನಿಂತೆವು. ಗಾಬರಿಗೊಂಡವರಲ್ಲಿ ನಾನೇ ಮೊದಲಿಗನಾಗಿದ್ದೆ. ನಾನು ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹುಡುಕುತ್ತಾ ಹೊರಟೆನು. ಕೊನೆಗೆ ಬನೂ ನಜ್ಜಾರ್ ಗೋತ್ರದ ಅನ್ಸಾರ್‌ಗಳ ಒಂದು ತೋಟದ ಬಳಿಗೆ ಬಂದೆನು. ಅದಕ್ಕೆ ಬಾಗಿಲು ಇರಬಹುದೇ ಎಂದು ನಾನು ಅದರ ಸುತ್ತಲೂ ಸುತ್ತಾಡಿದೆನು. ಆದರೆ ನನಗೆ ಸಿಗಲಿಲ್ಲ. ಅಷ್ಟರಲ್ಲಿ, ಹೊರಗಿನ ಬಾವಿಯಿಂದ ತೋಟದ ಒಳಗೆ ಒಂದು ಸಣ್ಣ ನೀರಿನ ಕಾಲುವೆ (‘ರಬೀಅ್’ - ಅಂದರೆ ತೊರೆ) ಹರಿಯುತ್ತಿರುವುದನ್ನು ಕಂಡೆನು. ನಾನು ನನ್ನ ದೇಹವನ್ನು ಕುಗ್ಗಿಸಿಕೊಂಡು ನುಸುಳಿ, ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೋದೆನು. ಅವರು (ನನ್ನನ್ನು ನೋಡಿ) ಹೇಳಿದರು: "ಅಬೂ ಹುರೈರಾ". ನಾನು ಹೇಳಿದೆನು: "ಹೌದು, ಓ ಅಲ್ಲಾಹನ ಸಂದೇಶವಾಹಕರೇ". ಅವರು ಕೇಳಿದರು: "ನೀವೇಕೆ ಬಂದಿರಿ?". ನಾನು ಹೇಳಿದೆನು: "ನೀವು ನಮ್ಮ ಮಧ್ಯದಲ್ಲಿದ್ದಿರಿ. ನಂತರ ನೀವು ಎದ್ದುಹೋದಿರಿ ಮತ್ತು ಹಿಂತಿರುಗಲು ತಡ ಮಾಡಿದಿರಿ. ನಮ್ಮಿಂದ ಬೇರ್ಪಟ್ಟ ನಿಮಗೆ ಹಾನಿಯಾಗಬಹುದೆಂದು ನಾವು ಭಯಪಟ್ಟೆವು. ನಮಗೆ ಗಾಬರಿಯಾಯಿತು. ಗಾಬರಿಗೊಂಡವರಲ್ಲಿ ನಾನೇ ಮೊದಲಿಗನಾಗಿದ್ದೆ. ನಾನು ಈ ತೋಟದ ಬಳಿಗೆ ಬಂದೆನು, ಮತ್ತು ನರಿಯು ನುಸುಳುವಂತೆ ನಾನು ನುಸುಳಿ ಬಂದೆನು. ಆ ಜನರು (ಇತರ ಸಹಾಬಿಗಳು) ನನ್ನ ಹಿಂದೆಯೇ ಇದ್ದಾರೆ". ಆಗ ಅವರು ಹೇಳಿದರು: "ಓ ಅಬೂ ಹುರೈರಾ". ಅವರು ತಮ್ಮ ಪಾದರಕ್ಷೆಗಳನ್ನು ನನಗೆ ನೀಡಿದರು. ಅವರು ಹೇಳಿದರು: "ನನ್ನ ಈ ಪಾದರಕ್ಷೆಗಳೊಂದಿಗೆ ಹೋಗಿರಿ. ಈ ತೋಟದ ಗೋಡೆಯ ಆಚೆ, 'ಲಾ ಇಲಾಹ ಇಲ್ಲಲ್ಲಾಹ್' (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯನಿಲ್ಲ) ಎಂದು ಅದರ ಬಗ್ಗೆ ತನ್ನ ಹೃದಯದಲ್ಲಿ ದೃಢ ವಿಶ್ವಾಸವುಳ್ಳವನಾಗಿ ಸಾಕ್ಷಿ ನುಡಿಯುವ ಯಾರನ್ನಾದರೂ ನೀವು ಭೇಟಿಯಾದರೆ, ಅವನಿಗೆ ಸ್ವರ್ಗದ ಶುಭವಾರ್ತೆ ನೀಡಿರಿ". ನಾನು ಭೇಟಿಯಾದವರಲ್ಲಿ ಮೊದಲಿಗರು ಉಮರ್ ಆಗಿದ್ದರು. ಅವರು ಕೇಳಿದರು: "ಓ ಅಬೂ ಹುರೈರಾ, ಈ ಪಾದರಕ್ಷೆಗಳು ಏನು?". ನಾನು ಹೇಳಿದೆನು: "ಇವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಾದರಕ್ಷೆಗಳು. ಅವರು ನನ್ನನ್ನು ಇವುಗಳೊಂದಿಗೆ ಕಳುಹಿಸಿದ್ದಾರೆ. ಯಾರು 'ಲಾ ಇಲಾಹ ಇಲ್ಲಲ್ಲಾಹ್' ಎಂದು ಅದರ ಬಗ್ಗೆ ತನ್ನ ಹೃದಯದಲ್ಲಿ ದೃಢ ವಿಶ್ವಾಸವುಳ್ಳವನಾಗಿ ಸಾಕ್ಷಿ ನುಡಿಯುತ್ತಾರೋ ಅವರನ್ನು ನಾನು ಭೇಟಿಯಾದರೆ, ಅವರಿಗೆ ಸ್ವರ್ಗದ ಶುಭವಾರ್ತೆ ನೀಡಬೇಕೆಂದು". ಆಗ ಉಮರ್ ತಮ್ಮ ಕೈಯಿಂದ ನನ್ನ ಎದೆಯ ನಡುವೆ ಹೊಡೆದರು, ನಾನು ನನ್ನ ಪೃಷ್ಠದ ಮೇಲೆ ಬಿದ್ದೆನು. ಅವರು ಹೇಳಿದರು: "ಓ ಅಬೂ ಹುರೈರಾ, ಹಿಂತಿರುಗಿ ಹೋಗಿ". ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹಿಂತಿರುಗಿದೆನು. ನಾನು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದೆನು. ಉಮರ್ ನನ್ನ ಹಿಂದೆ ಬಂದರು. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಓ ಅಬೂ ಹುರೈರಾ, ನಿಮಗೇನಾಯಿತು?". ನಾನು ಹೇಳಿದೆನು: "ನಾನು ಉಮರ್ ಅವರನ್ನು ಭೇಟಿಯಾದೆನು, ಮತ್ತು ನೀವು ನನ್ನನ್ನು ಕಳುಹಿಸಿದ ವಿಷಯವನ್ನು ಅವರಿಗೆ ತಿಳಿಸಿದೆನು. ಆಗ ಅವರು ನನ್ನ ಎದೆಯ ನಡುವೆ ಒಂದು ಹೊಡೆತ ಹೊಡೆದರು. ನಾನು ನನ್ನ ಪೃಷ್ಠದ ಮೇಲೆ ಬಿದ್ದೆನು. ಅವರು 'ಹಿಂತಿರುಗು' ಎಂದು ಹೇಳಿದರು". ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಓ ಉಮರ್, ನೀವು ಹೀಗೆ ಮಾಡಲು ಕಾರಣವೇನು?". ಉಮರ್ ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ನನ್ನ ತಂದೆ ತಾಯಿ ನಿಮಗಾಗಿ ಸಮರ್ಪಿತರಾಗಲಿ, 'ಲಾ ಇಲಾಹ ಇಲ್ಲಲ್ಲಾಹ್' ಎಂದು ಅದರ ಬಗ್ಗೆ ತನ್ನ ಹೃದಯದಲ್ಲಿ ದೃಢ ವಿಶ್ವಾಸವುಳ್ಳವನಾಗಿ ಸಾಕ್ಷಿ ನುಡಿಯುವ ಯಾರನ್ನಾದರೂ ಭೇಟಿಯಾದರೆ ಅವನಿಗೆ ಸ್ವರ್ಗದ ಶುಭವಾರ್ತೆ ನೀಡಬೇಕೆಂದು ನೀವು ಅಬೂ ಹುರೈರಾ ರನ್ನು ನಿಮ್ಮ ಪಾದರಕ್ಷೆಗಳೊಂದಿಗೆ ಕಳುಹಿಸಿದ್ದಿರಾ?" ಪ್ರವಾದಿಯವರು ಹೇಳಿದರು: "ಹೌದು". ಉಮರ್ ಹೇಳಿದರು: "ಹಾಗೆ ಮಾಡಬೇಡಿ. ಏಕೆಂದರೆ, ಜನರು ಅದರ ಮೇಲೆ ಮಾತ್ರ ಭರವಸೆಯಿಟ್ಟು ಕರ್ಮವೆಸಗುವುದನ್ನು ಬಿಟ್ಟು ಬಿಡಬಹುದೆಂದು ನಾನು ಭಯಪಡುತ್ತೇನೆ. ಅವರನ್ನು ಬಿಟ್ಟುಬಿಡಿ, ಅವರು ಕರ್ಮವೆಸಗುತ್ತಿರಲಿ". ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹಾಗಾದರೆ ಅವರನ್ನು (ಹಾಗೆಯೇ ಕರ್ಮವೆಸಗುತ್ತಿರಲು) ಬಿಟ್ಟುಬಿಡಿ".
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी Tiếng Việt සිංහල ئۇيغۇرچە Kurdî Português Kiswahili Nederlands অসমীয়া ગુજરાતી Magyar ქართული Hausa Română ไทย తెలుగు मराठी ភាសាខ្មែរ دری አማርኛ Македонски Українська ਪੰਜਾਬੀ മലയാളം Mooreالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬೂ ಬಕ್ರ್ ಮತ್ತು ಉಮರ್ ಅವರನ್ನೊಳಗೊಂಡ ತಮ್ಮ ಸಹಾಬಿಗಳ ಗುಂಪಿನಲ್ಲಿ ಕುಳಿತಿದ್ದರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎದ್ದುಹೋದರು, ಮತ್ತು (ಹಿಂತಿರುಗಲು) ತಡ ಮಾಡಿದರು. ಆಗ ಅವರಿಗೆ ಶತ್ರುವಿನಿಂದ ಸೆರೆಹಿಡಿಯುವಿಕೆ ಅಥವಾ ಬೇರೆ ರೀತಿಯ ಕೆಡುಕು ಸಂಭವಿಸಬಹುದೆಂದು ಸಹಾಬಿಗಳು ಭಯಪಟ್ಟರು. ಆಗ ಸಹಾಬಿಗಳು (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಗಾಬರಿಯಿಂದ ಎದ್ದು ನಿಂತರು. ಅವರಲ್ಲಿ ಮೊತ್ತಮೊದಲು ಗಾಬರಿಗೊಂಡವರು ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಆಗಿದ್ದರು. ಅವರು ಬನೂ ನಜ್ಜಾರ್ ಅವರ ಒಂದು ತೋಟದ ಬಳಿಗೆ ಬಂದರು. ಅವರು ಅದಕ್ಕೆ ತೆರೆದ ಬಾಗಿಲು ಇರಬಹುದೆಂದು ಅದರ ಸುತ್ತಲೂ ಸುತ್ತಾಡಿದರು. ಆದರೆ ಸಿಗಲಿಲ್ಲ. ಆದರೆ ಅವರು ಗೋಡೆಯಲ್ಲಿ ನೀರು ಒಳಹೋಗುವ ಒಂದು ಸಣ್ಣ ದ್ವಾರವನ್ನು ಕಂಡರು. ಅವರು ತಮ್ಮ ದೇಹವನ್ನು ಕುಗ್ಗಿಸಿಕೊಂಡು ಒಳಗೆ ಪ್ರವೇಶಿಸಿದರು, ಅಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದ್ದರು. ಪ್ರವಾದಿಯವರು ಕೇಳಿದರು: ನೀವು ಅಬೂ ಹುರೈರಾ? ಅವರು “ಹೌದು” ಎಂದು ಉತ್ತರಿಸಿದರು. ಪ್ರವಾದಿಯವರು ಕೇಳಿದರು: ನೀನೇಕೆ ಬಂದೆ? ಅಬೂ ಹುರೈರಾ ಹೇಳಿದರು: ನೀವು ನಮ್ಮ ಮಧ್ಯದಲ್ಲಿದ್ದಿರಿ. ನಂತರ ಎದ್ದುಹೋದಿರಿ ಮತ್ತು ಹಿಂತಿರುಗಲು ತಡ ಮಾಡಿದಿರಿ. ನಮ್ಮಿಂದ ಬೇರ್ಪಟ್ಟ ನಿಮಗೆ ಹಾನಿಯಾಗಬಹುದೆಂದು ನಾವು ಭಯಪಟ್ಟೆವು. ನಮಗೆ ಗಾಬರಿಯಾಯಿತು. ಗಾಬರಿಗೊಂಡವರಲ್ಲಿ ನಾನೇ ಮೊದಲಿಗನಾಗಿದ್ದೆ. ನಾನು ಈ ತೋಟದ ಬಳಿಗೆ ಬಂದೆನು, ಮತ್ತು ನರಿಯು ನುಸುಳುವಂತೆ ನಾನು ನುಸುಳಿ ಬಂದೆನು. ಆ ಜನರು (ಇತರ ಸಹಾಬಿಗಳು) ನನ್ನ ಹಿಂದೆಯೇ ಇದ್ದಾರೆ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರು ಸತ್ಯವಂತರು ಎಂಬುದಕ್ಕೆ ಸಾಕ್ಷಿಯಾಗಿ ಮತ್ತು ಗುರುತಾಗಿ ತಮ್ಮ ಪಾದರಕ್ಷೆಗಳನ್ನು ನೀಡಿ ಹೇಳಿದರು: ನನ್ನ ಈ ಪಾದರಕ್ಷೆಗಳೊಂದಿಗೆ ಹೋಗಿರಿ. ಈ ತೋಟದ ಗೋಡೆಯ ಆಚೆ, 'ಲಾ ಇಲಾಹ ಇಲ್ಲಲ್ಲಾಹ್' (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯನಿಲ್ಲ) ಎಂದು ಅದರ ಬಗ್ಗೆ ತನ್ನ ಹೃದಯದಲ್ಲಿ ದೃಢ ವಿಶ್ವಾಸವುಳ್ಳವನಾಗಿ ಸಾಕ್ಷಿ ನುಡಿಯುವ ಯಾರನ್ನಾದರೂ ನೀವು ಭೇಟಿಯಾದರೆ, ಯಾರ ಗುಣಲಕ್ಷಣ ಇದಾಗಿರುತ್ತದೆಯೋ ಅವನು ಸ್ವರ್ಗವಾಸಿಗಳಲ್ಲಿ ಒಬ್ಬನು (ಎಂದು ಶುಭವಾರ್ತೆ ನೀಡಿರಿ). ಅವರು ಭೇಟಿಯಾದವರಲ್ಲಿ ಮೊದಲಿಗರು ಉಮರ್ ಆಗಿದ್ದರು. ಉಮರ್ ಕೇಳಿದರು: ಓ ಅಬೂ ಹುರೈರಾ, ಈ ಪಾದರಕ್ಷೆಗಳು ಏನು? ಅವರು ಹೇಳಿದರು: ಇವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಾದರಕ್ಷೆಗಳು. ಅವರು ನನ್ನನ್ನು ಇವುಗಳೊಂದಿಗೆ ಕಳುಹಿಸಿದ್ದಾರೆ, ಯಾರು 'ಲಾ ಇಲಾಹ ಇಲ್ಲಲ್ಲಾಹ್' ಎಂದು ಅದರ ಬಗ್ಗೆ ತನ್ನ ಹೃದಯದಲ್ಲಿ ದೃಢ ವಿಶ್ವಾಸವುಳ್ಳವನಾಗಿ ಸಾಕ್ಷಿ ನುಡಿಯುತ್ತಾರೋ ಅವರನ್ನು ನಾನು ಭೇಟಿಯಾದರೆ, ಅವರಿಗೆ ಸ್ವರ್ಗದ ಶುಭವಾರ್ತೆ ನೀಡಬೇಕೆಂದು. ಆಗ ಉಮರ್ ತಮ್ಮ ಕೈಯಿಂದ ಅಬೂ ಹುರೈರಾ ರವರ ಎದೆಯ ಮೇಲೆ ಹೊಡೆದರು. ಅವರು ತಮ್ಮ ಪೃಷ್ಠದ ಮೇಲೆ ಬಿದ್ದರು. ಉಮರ್ ಹೇಳಿದರು: ಓ ಅಬೂ ಹುರೈರಾ, ಹಿಂತಿರುಗಿರಿ. ನಾನು ಗಾಬರಿಯಿಂದ, ಮುಖ ಬದಲಾಗಿ, ಅಳಲು ಸಿದ್ಧನಾಗಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹಿಂತಿರುಗಿದೆನು. ಉಮರ್ ನನ್ನನ್ನು ಹಿಂಬಾಲಿಸಿ ನನ್ನ ಹಿಂದೆ ನಡೆದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: ಓ ಅಬೂ ಹುರೈರಾ, ನಿಮಗೇನಾಯಿತು? ನಾನು ಹೇಳಿದೆನು: ನಾನು ಉಮರ್ ಅವರನ್ನು ಭೇಟಿಯಾದೆನು, ಮತ್ತು ನೀವು ನನ್ನನ್ನು ಕಳುಹಿಸಿದ ವಿಷಯವನ್ನು ಅವರಿಗೆ ತಿಳಿಸಿದೆನು. ಆಗ ಅವರು ನನ್ನ ಎದೆಯ ಮೇಲೆ ಒಂದು ಹೊಡೆತ ಹೊಡೆದರು. ನಾನು ನನ್ನ ಪೃಷ್ಠದ ಮೇಲೆ ಬಿದ್ದೆನು. ಅವರು 'ಹಿಂತಿರುಗು' ಎಂದು ಹೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಓ ಉಮರ್, ನೀವು ಹೀಗೆ ಮಾಡಲು ನಿಮ್ಮನ್ನು ಪ್ರೇರೇಪಿಸಿದ್ದೇನು? ಉಮರ್ ಹೇಳಿದರು: ಓ ಅಲ್ಲಾಹನ ಸಂದೇಶವಾಹಕರೇ, ನನ್ನ ತಂದೆ ತಾಯಿ ನಿಮಗಾಗಿ ಸಮರ್ಪಿತರಾಗಲಿ. ಯಾರು 'ಲಾ ಇಲಾಹ ಇಲ್ಲಲ್ಲಾಹ್' ಎಂದು ಅದರ ಬಗ್ಗೆ ತನ್ನ ಹೃದಯದಲ್ಲಿ ದೃಢ ವಿಶ್ವಾಸವುಳ್ಳವನಾಗಿ ಸಾಕ್ಷಿ ನುಡಿಯುತ್ತಾರೋ ಅವರನ್ನು ಭೇಟಿಯಾದರೆ ಅವರಿಗೆ ಸ್ವರ್ಗದ ಶುಭವಾರ್ತೆ ನೀಡಬೇಕೆಂದು ನೀವು ಅಬೂ ಹುರೈರಾ ಅವರನ್ನು ನಿಮ್ಮ ಪಾದರಕ್ಷೆಗಳೊಂದಿಗೆ ಕಳುಹಿಸಿದಿರಾ? ಅವರು “ಹೌದು” ಎಂದು ಉತ್ತರಿಸಿದರು. ಉಮರ್ ಹೇಳಿದರು: ಹಾಗೆ ಮಾಡಬೇಡಿ. ಏಕೆಂದರೆ, ಜನರು (ಕೇವಲ) ಆ ವಚನದ ಮೇಲೆ ಮಾತ್ರ ಭರವಸೆಯಿಟ್ಟು ಕರ್ಮವೆಸಗುವುದನ್ನು ಬಿಟ್ಟು ಬಿಡಬಹುದೆಂದು ನಾನು ಭಯಪಡುತ್ತೇನೆ. ಅವರನ್ನು ಬಿಟ್ಟುಬಿಡಿ, ಅವರು ಕರ್ಮವೆಸಗುತ್ತಿರಲಿ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಹಾಗಾದರೆ ಅವರನ್ನು (ಕರ್ಮವೆಸಗುತ್ತಿರಲು) ಬಿಟ್ಟುಬಿಡಿ.فوائد الحديث
ಸಹಾಬಿಗಳಿಗೆ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಇದ್ದ ತೀವ್ರವಾದ ಪ್ರೀತಿಯನ್ನು ಮತ್ತು ಪ್ರತಿಯೊಂದು ಕೆಡುಕಿನಿಂದಲೂ ಅವರು ಸುರಕ್ಷತವಾಗಿರಬೇಕೆಂದು ಅವರಿಗಿದ್ದ ಕಾಳಜಿಯನ್ನು ವಿವರಿಸಲಾಗಿದೆ.
ಸಂತೋಷದ ಸುದ್ದಿಯೊಂದಿಗೆ ಶುಭವಾರ್ತೆ ನೀಡುವುದು ನಿಯಮಗೊಳಿಸಲಾಗಿದೆ.
ಸತ್ಯವಿಶ್ವಾಸ (ಈಮಾನ್) ಎಂದರೆ ಮಾತು, ಕ್ರಿಯೆ ಮತ್ತು ವಿಶ್ವಾಸವಾಗಿದೆ.
ಖಾದಿ ಇಯಾದ್ ಮತ್ತು ಇತರರು ಹೇಳುತ್ತಾರೆ: "ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರ ಕೃತ್ಯ ಮತ್ತು ಅವರು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡೆಸಿದ ಚರ್ಚೆಯು ಅವರ ಮೇಲೆ ಆಕ್ಷೇಪಣೆ ಎತ್ತುವುದಾಗಲಿ ಅಥವಾ ಅವರ ಆದೇಶವನ್ನು ತಿರಸ್ಕರಿಸುವುದಾಗಲಿ ಆಗಿರಲಿಲ್ಲ. ಏಕೆಂದರೆ ಅಬೂ ಹುರೈರಾ ಅವರನ್ನು ಕಳುಹಿಸಿದ್ದರಲ್ಲಿ ಸಮುದಾಯದ ಹೃದಯಗಳನ್ನು ಸಂತೋಷಪಡಿಸುವುದು ಮತ್ತು ಅವರಿಗೆ ಶುಭವಾರ್ತೆ ನೀಡುವುದನ್ನು ಹೊರತುಪಡಿಸಿ ಬೇರೇನೂ ಇರಲಿಲ್ಲ. ಆದರೆ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರು ಈ ವಿಷಯವನ್ನು (ಸಾರ್ವಜನಿಕವಾಗಿ) ಮುಚ್ಚಿಡುವುದು ಜನರಿಗೆ ಹೆಚ್ಚು ಪ್ರಯೋಜನಕಾರಿ ಮತ್ತು ಅವರು (ಕೇವಲ ಆ ವಚನದ ಮೇಲೆ) ಅವಲಂಬಿತರಾಗದಿರಲು ಹೆಚ್ಚು ಸೂಕ್ತವೆಂದು ಭಾವಿಸಿದರು. ಈ ಶುಭವಾರ್ತೆಯನ್ನು ತಕ್ಷಣ ತಿಳಿಸುವುದಕ್ಕಿಂತ ಇದು ಅವರಿಗೆ ಹೆಚ್ಚು ಒಳಿತನ್ನು ತರುತ್ತದೆ ಎಂದು ಭಾವಿಸಿದರು. ಅವರು ಈ ವಿಷಯವನ್ನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಮನಕ್ಕೆ ತಂದಾಗ, ಪ್ರವಾದಿಯವರು ಅದನ್ನು ಅನುಮೋದಿಸಿದರು."
ಇಮಾಮ್ ನವವಿ ಹೇಳುತ್ತಾರೆ: "ಈ ಹದೀಸ್‌ನಲ್ಲಿ, ಇಮಾಮ್ ಅಥವಾ ಯಾವುದೇ ಮುಖಂಡನು ಒಂದು ವಿಷಯವನ್ನು ಸರಿಯೆಂದು ಕಂಡು, ಅವನ ಅನುಯಾಯಿಗಳಲ್ಲಿ ಕೆಲವರು ಅದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಹೊಂದಿದ್ದರೆ, ಅನುಯಾಯಿಯು ಅದನ್ನು ಮುಖಂಡನ ಮುಂದೆ ಇಡಬೇಕು ಮತ್ತು ಮುಖಂಡನು ಅದನ್ನು ಪರಿಶೀಲಿಸಬೇಕು. ಒಂದು ವೇಳೆ ಅನುಯಾಯಿ ಹೇಳಿದ್ದು ಸರಿ ಎಂದು ಕಂಡುಬಂದರೆ, ಅವನು ಅದನ್ನು ಸ್ವೀಕರಿಸಬೇಕು. ಇಲ್ಲದಿದ್ದರೆ ಅನುಯಾಯಿಗೆ ಉಂಟಾದ ಸಂಶಯಕ್ಕೆ ಉತ್ತರವನ್ನು ವಿವರಿಸಿಕೊಡಬೇಕು."
ಒಳಿತಿಗಾಗಿ ಅಥವಾ ಕೆಡುಕಿನ ಭಯದಿಂದಾಗಿ, ಅಗತ್ಯವಿಲ್ಲದ ಕೆಲವು ಜ್ಞಾನವನ್ನು ಪ್ರಸಾರ ಮಾಡದೆ ತಡೆಹಿಡಿಯಲು ಅನುಮತಿಯಿದೆ.
ತೌಹೀದ್‌ನ ಜನರಿಗೆ (ಏಕದೇವ ವಿಶ್ವಾಸಿಗಳಿಗೆ) ಮಹಾನ್ ಶುಭವಾರ್ತೆಯನ್ನು ನೀಡಲಾಗಿದೆ. ಯಾರು 'ಲಾ ಇಲಾಹ ಇಲ್ಲಲ್ಲಾಹ್' ಎಂದು ತನ್ನ ಹೃದಯದಿಂದ ಪ್ರಾಮಾಣಿಕವಾಗಿ ಸಾಕ್ಷಿ ನುಡಿಯುತ್ತಾ ಮರಣ ಹೊಂದುತ್ತಾರೋ ಅವರಿಗೆ ಸ್ವರ್ಗವಿದೆ.
ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರ ಶಕ್ತಿ, ಬುದ್ಧಿವಂತಿಕೆ, ಮತ್ತು ವಿಶಾಲ ಪಾಂಡಿತ್ಯವನ್ನು ತಿಳಿಸಲಾಗಿದೆ.
ಇಮಾಮ್ ನವವಿ ಹೇಳುತ್ತಾರೆ: "ಒಬ್ಬ ವ್ಯಕ್ತಿಯು ಬೇರೊಬ್ಬರ ಒಡೆತನದ ಸ್ಥಳಕ್ಕೆ ಅವರ ಅನುಮತಿಯಿಲ್ಲದೆ ಪ್ರವೇಶಿಸಲು ಅನುಮತಿಯಿದೆ. ತಮ್ಮ ನಡುವಿನ ಸ್ನೇಹ ಅಥವಾ ಬೇರೆ ಕಾರಣದಿಂದ ಅವರು ಅದಕ್ಕೆ ಒಪ್ಪುತ್ತಾರೆಂದು ತಿಳಿದಿದ್ದರೆ ಮಾತ್ರ."
التصنيفات
Oneness of Allah's Worship