ಖಂಡಿತವಾಗಿಯೂ ನೀನು ಕಲ್ಲು ಎಂದು ನನಗೆ ತಿಳಿದಿದೆ. ನೀನು ತೊಂದರೆ ಕೊಡುವುದಿಲ್ಲ ಅಥವಾ ಪ್ರಯೋಜನವನ್ನು ನೀಡುವುದಿಲ್ಲ. ಪ್ರವಾದಿಯವರು…

ಖಂಡಿತವಾಗಿಯೂ ನೀನು ಕಲ್ಲು ಎಂದು ನನಗೆ ತಿಳಿದಿದೆ. ನೀನು ತೊಂದರೆ ಕೊಡುವುದಿಲ್ಲ ಅಥವಾ ಪ್ರಯೋಜನವನ್ನು ನೀಡುವುದಿಲ್ಲ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಿನ್ನನ್ನು ಚುಂಬಿಸುವುದನ್ನು ನಾನು ನೋಡದಿರುತ್ತಿದ್ದರೆ ನಾನು ನಿನ್ನನ್ನು ಚುಂಬಿಸುತ್ತಿರಲಿಲ್ಲ

ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹಜರುಲ್-ಅಸ್ವದ್ (ಕಪ್ಪು ಕಲ್ಲು) ಬಳಿಗೆ ಬಂದು ಅದನ್ನು ಚುಂಬಿಸಿದರು. ನಂತರ ಹೇಳಿದರು: "ಖಂಡಿತವಾಗಿಯೂ ನೀನು ಕಲ್ಲು ಎಂದು ನನಗೆ ತಿಳಿದಿದೆ. ನೀನು ತೊಂದರೆ ಕೊಡುವುದಿಲ್ಲ ಅಥವಾ ಪ್ರಯೋಜನವನ್ನು ನೀಡುವುದಿಲ್ಲ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಿನ್ನನ್ನು ಚುಂಬಿಸುವುದನ್ನು ನಾನು ನೋಡದಿರುತ್ತಿದ್ದರೆ ನಾನು ನಿನ್ನನ್ನು ಚುಂಬಿಸುತ್ತಿರಲಿಲ್ಲ."

[صحيح] [متفق عليه]

الشرح

ಸತ್ಯವಿಶ್ವಾಸಿಗಳ ನಾಯಕ ಉಮರ್ ಬಿನ್ ಅಲ್-ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಕಅಬಾದ ಮೂಲೆಯಲ್ಲಿರುವ ಹಜರುಲ್-ಅಸ್ವದ್ ಬಳಿಗೆ ಬಂದು ಅದನ್ನು ಚುಂಬಿಸಿದರು. ನಂತರ ಹೇಳಿದರು: "ಖಂಡಿತವಾಗಿಯೂ ನೀನು ಕಲ್ಲು ಎಂದು ನನಗೆ ತಿಳಿದಿದೆ. ನೀನು ತೊಂದರೆ ಕೊಡುವುದಿಲ್ಲ ಅಥವಾ ಪ್ರಯೋಜನವನ್ನು ನೀಡುವುದಿಲ್ಲ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಿನ್ನನ್ನು ಚುಂಬಿಸುವುದನ್ನು ನಾನು ನೋಡದಿದ್ದರೆ ನಾನು ನಿನ್ನನ್ನು ಚುಂಬಿಸುತ್ತಿರಲಿಲ್ಲ."

فوائد الحديث

ತವಾಫ್ ಮಾಡುವವರು ಹಜರುಲ್ ಅಸ್ವದ್‌ನ ಬಳಿ ಬಂದಾಗ, ಸುಲಭವಾಗಿ ಸಾಧ್ಯವಾದರೆ ಅದನ್ನು ಚುಂಬಿಸುವುದು ನಿಯಮವಾಗಿದೆ.

ಹಜರುಲ್ ಅಸ್ವದ್ (ಕಪ್ಪು ಕಲ್ಲು) ಅನ್ನು ಚುಂಬಿಸುವುದರ ಉದ್ದೇಶವು ಅಲ್ಲಾಹುವಿನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅನುಸರಿಸುವುದಾಗಿದೆ.

ನವವಿ ಹೇಳುತ್ತಾರೆ: "ಇದರ ಅರ್ಥವೇನೆಂದರೆ ಅದಕ್ಕೆ ಪ್ರಯೋಜನ ಅಥವಾ ತೊಂದರೆ ಮಾಡುವ ಯಾವುದೇ ಸಾಮರ್ಥ್ಯವಿಲ್ಲ. ಅದು ಅಲ್ಲಾಹು ಸೃಷ್ಟಿಸಿದ ಒಂದು ಕಲ್ಲಾಗಿದ್ದು ಇತರ ಕಲ್ಲುಗಳಂತೆಯೇ ಅದು ತೊಂದರೆ ಅಥವಾ ಪ್ರಯೋಜನವನ್ನು ನೀಡುವುದಿಲ್ಲ. ಈ ಸಂಗತಿ ಇತರ ದೇಶಗಳಲ್ಲಿ ಪ್ರಚಾರವಾಗಲಿ ಮತ್ತು ವಿವಿಧ ದೇಶಗಳಿಂದ ಹಜ್ಜ್ ನಿರ್ವಹಿಸಲು ಬರುವ ಯಾತ್ರಿಕರು ಇದನ್ನು ನೆನಪಿಟ್ಟುಕೊಳ್ಳಲಿ ಎಂಬ ಉದ್ದೇಶದಿಂದ ಉಮರ್ ಇದನ್ನು ಹಜ್ಜ್ ಸಮಯದಲ್ಲಿ ಘೋಷಿಸಿದ್ದರು."

ಆರಾಧನೆಗಳೆಲ್ಲವೂ ತೌಕೀಫಿಯ್ಯ (ಅಲ್ಲಾಹುವಿನ ಆದೇಶದ ಮೇಲೆ ಮಾತ್ರ ಆಧಾರಿತವಾಗಿವೆ) ಆಗಿವೆ. ಆದ್ದರಿಂದ ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಿಯಮವಾಗಿ ಮಾಡಿರುವುದನ್ನು ಹೊರತುಪಡಿಸಿ ಇತರ ಯಾವುದನ್ನೂ ಆರಾಧನೆಗಳೆಂದು ಪರಿಗಣಿಸಲಾಗುವುದಿಲ್ಲ.

ಆರಾಧನೆಯು ಅಧಿಕೃತವಾಗಿ ಸಾಬೀತಾಗಿದ್ದರೆ, ಅದರ ಹಿಂದಿರುವ ಯುಕ್ತಿಯು ತಿಳಿದಿಲ್ಲದಿದ್ದರೂ ಸಹ ಅದನ್ನು ನಿರ್ವಹಿಸುವುದು ಕಡ್ಡಾಯವಾಗಿದೆ. ಏಕೆಂದರೆ ಜನರು ಅದನ್ನು ಪಾಲಿಸುವುದು ಮತ್ತು ಅದನ್ನು ನಿರ್ವಹಿಸುವ ಮೂಲಕ ವಿಧೇಯರಾಗುವುದು ಅದರ ಉದ್ದೇಶಿತ ಯುಕ್ತಿಗಳಲ್ಲಿ ಸೇರಿದೆ.

ಆರಾಧನೆಯ ರೂಪದಲ್ಲಿ ಶರಿಯತ್ ಚುಂಬಿಸಲು ಆದೇಶಿಸದ ಕಲ್ಲು ಮುಂತಾದ ವಸ್ತುಗಳನ್ನು ಚುಂಬಿಸುವುದನ್ನು ನಿಷೇಧಿಸಲಾಗಿದೆ.

التصنيفات

Merit of the Companions, Rulings and Issues of Hajj and ‘Umrah