ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯನ್ನು ಪ್ರವೇಶಿಸುವಾಗ ಹೀಗೆ ಹೇಳುತ್ತಿದ್ದರು: "ಬಹಿಷ್ಕೃತನಾದ…

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯನ್ನು ಪ್ರವೇಶಿಸುವಾಗ ಹೀಗೆ ಹೇಳುತ್ತಿದ್ದರು: "ಬಹಿಷ್ಕೃತನಾದ ಶೈತಾನನಿಂದ ನಾನು ಮಹಾನನಾದ ಅಲ್ಲಾಹನೊಂದಿಗೆ, ಅವನ ಗೌರವಾನ್ವಿತ ಮುಖದೊಂದಿಗೆ ಮತ್ತು ಅವನ ಅನಶ್ವರ ಅಧಿಕಾರದೊಂದಿಗೆ ರಕ್ಷೆ ಬೇಡುತ್ತೇನೆ

ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯನ್ನು ಪ್ರವೇಶಿಸುವಾಗ ಹೀಗೆ ಹೇಳುತ್ತಿದ್ದರು: "ಬಹಿಷ್ಕೃತನಾದ ಶೈತಾನನಿಂದ ನಾನು ಮಹಾನನಾದ ಅಲ್ಲಾಹನೊಂದಿಗೆ, ಅವನ ಗೌರವಾನ್ವಿತ ಮುಖದೊಂದಿಗೆ ಮತ್ತು ಅವನ ಅನಶ್ವರ ಅಧಿಕಾರದೊಂದಿಗೆ ರಕ್ಷೆ ಬೇಡುತ್ತೇನೆ." ಅವರು ಕೇಳಿದರು: "ಇಷ್ಟೇ ಏನು?" ನಾನು ಹೇಳಿದೆ: "ಹೌದು." ಅವರು ಹೇಳಿದರು: "ಇದನ್ನು ಪಠಿಸಿದರೆ ಶೈತಾನನು ಹೀಗೆ ಹೇಳುವನು: ಈ ಇಡೀ ದಿನ ಅವನು ನನ್ನಿಂದ ರಕ್ಷಿಸಲ್ಪಟ್ಟಿದ್ದಾನೆ."

[حسن] [رواه أبو داود]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯನ್ನು ಪ್ರವೇಶಿಸುವಾಗ ಹೀಗೆ ಹೇಳುತ್ತಿದ್ದರು: "ಅಊದು ಬಿಲ್ಲಾಹಿಲ್ ಅಝೀಮ್" - ನಾನು ಅಲ್ಲಾಹನೊಂದಿಗೆ ಮತ್ತು ಅವನ ಗುಣಲಕ್ಷಣಗಳೊಂದಿಗೆ ರಕ್ಷೆ ಬೇಡುತ್ತೇನೆ ಮತ್ತು ಆಶ್ರಯ ಬೇಡುತ್ತೇನೆ. "ವಬಿವಜ್‌ಹಿಹಿಲ್ ಕರೀಮ್" - ಅವನ ಉದಾರ ಮತ್ತು ಗೌರವಾರ್ಹ ಮುಖದೊಂದಿಗೆ. "ವಸುಲ್ತಾನಿಹಿ" - ಅವನ ಸೃಷ್ಟಿಗಳ ಪೈಕಿ ಅವನಿಚ್ಛಿಸಿದವರ ಮೇಲೆ ಅವನಿಗಿರುವ ಪ್ರಾಬಲ್ಯ, ಸಾಮರ್ಥ್ಯ ಮತ್ತು ಅಧಿಕಾರದೊಂದಿಗೆ. "ಅಲ್ ಕದೀಮ್" - ಶಾಶ್ವತ ಮತ್ತು ಅನಶ್ವರವಾದ. "ಮಿನ ಶ್ಶೈತಾನಿ ರ್‍ರಜೀಮ್" - ಅಲ್ಲಾಹನ ಕರುಣೆಯಿಂದ ದೂರಗೊಳಿಸಲಾದ ಮತ್ತು ಬಹಿಷ್ಕರಿಸಲಾದ ಶೈತಾನನಿಂದ. ಅಂದರೆ, ಓ ಅಲ್ಲಾಹ್! ನನ್ನನ್ನು ಅವನ ಪಿಸುಮಾತುಗಳು, ಅವನ ಪ್ರಲೋಭನೆಗಳು, ಅವನ ಹೆಜ್ಜೆಗಳು, ಅವನ ಆಲೋಚನೆಗಳು, ಅವನ ಒಳನೋಟಗಳು ಮತ್ತು ಅವನ ದುರ್ಮಾರ್ಗದಿಂದ ರಕ್ಷಿಸು. ಏಕೆಂದರೆ, ದುರ್ಮಾರ್ಗಕ್ಕೆ, ಪ್ರಲೋಭನೆಗಳಿಗೆ ಮತ್ತು ಅವಿವೇಕತನಗಳಿಗೆ ಅವನೇ ಕಾರಣಕರ್ತನು. ಆಗ ಒಬ್ಬರು ಅಬ್ದುಲ್ಲಾ ಬಿನ್ ಅಮ್ರ್ ರೊಡನೆ ಕೇಳಿದರು: "ಇಷ್ಟೇ ಏನು?" ಅಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದ್ದು ಇಷ್ಟೇ ಏನು? ಅವರು “ಹೌದು” ಎಂದು ಉತ್ತರಿಸಿದರು. ಮಸೀದಿಗೆ ಪ್ರವೇಶಿಸುವವನು ಈ ಪ್ರಾರ್ಥನೆ ಪಠಿಸಿದರೆ, ಶೈತಾನನು ಹೇಳುವನು: "ಮಸೀದಿಗೆ ಪ್ರವೇಶಿಸಿದ ಈ ವ್ಯಕ್ತಿ ಎಲ್ಲಾ ಸಮಯಗಳಲ್ಲೂ ರಾತ್ರಿಯಲ್ಲೂ ಹಗಲಲ್ಲೂ ನನ್ನಿಂದ ರಕ್ಷಿಸಲ್ಪಟ್ಟಿದ್ದಾನೆ."

فوائد الحديث

ಮಸೀದಿಯನ್ನು ಪ್ರವೇಶಿಸುವಾಗ ಈ ಸ್ಮರಣೆಯನ್ನು ಪಠಿಸುವ ಶ್ರೇಷ್ಠತೆಯನ್ನು ಮತ್ತು ಅದನ್ನು ಪಠಿಸುವವನನ್ನು ಅದು ಆ ದಿನ ಪೂರ್ತಿ ಶೈತಾನನಿಂದ ರಕ್ಷಿಸುತ್ತದೆ ಎಂದು ತಿಳಿಸಲಾಗಿದೆ.

ಶೈತಾನನ ಬಗ್ಗೆ ಮತ್ತು ಅವನು ಮುಸಲ್ಮಾನನನ್ನು ದುರ್ಮಾರ್ಗಿಯನ್ನಾಗಿ ಮಾಡಲು ಮತ್ತು ಪ್ರಲೋಭನೆಗೆ ಒಳಪಡಿಸಲು ಸದಾ ಹೊಂಚುಹಾಕುತ್ತಿರುತ್ತಾನೆ ಎಂದು ಎಚ್ಚರಿಸಲಾಗಿದೆ.

ಮನುಷ್ಯನ ಹೃದಯದಲ್ಲಿ ಅಲ್ಲಾಹನ ಬಗ್ಗೆಯಿರುವ ವಿಶ್ವಾಸ, ಈ ಪ್ರಾರ್ಥನೆಯನ್ನು ಪಠಿಸುವಾಗ ಅವನಿಗಿರುವ ಹೃದಯ ಸಾನಿಧ್ಯತೆ ಮತ್ತು ಇದರಲ್ಲಿ ಸೇರಿಕೊಂಡಿರುವ ಅಲ್ಲಾಹನ ವಾಗ್ದಾನದಲ್ಲಿ ಅವನಿಗಿರುವ ನಂಬಿಕೆ - ಇವು ಎಷ್ಟರಮಟ್ಟಿಗೆ ಅವನಲ್ಲಿರುತ್ತವೋ ಅಷ್ಟರ ಮಟ್ಟಿಗೆ ಅವನಿಗೆ ಶೈತಾನನ ದುರ್ಮಾರ್ಗದಿಂದ ರಕ್ಷಣೆ ದೊರೆಯುತ್ತದೆ.

التصنيفات

Oneness of Allah's Names and Attributes, Dhikr on Entering and Leaving the Mosque