ಯಾವುದೇ ವ್ಯಕ್ತಿಯು ತನ್ನ ಸಹೋದರನಿಗೆ 'ಓ ಕಾಫಿರ್ (ಸತ್ಯನಿಷೇಧಿ)' ಎಂದು ಹೇಳಿದರೆ, ಅವರಲ್ಲಿ ಒಬ್ಬನು ಆ ಮಾತಿಗೆ ಅರ್ಹನಾಗುತ್ತಾನೆ -…

ಯಾವುದೇ ವ್ಯಕ್ತಿಯು ತನ್ನ ಸಹೋದರನಿಗೆ 'ಓ ಕಾಫಿರ್ (ಸತ್ಯನಿಷೇಧಿ)' ಎಂದು ಹೇಳಿದರೆ, ಅವರಲ್ಲಿ ಒಬ್ಬನು ಆ ಮಾತಿಗೆ ಅರ್ಹನಾಗುತ್ತಾನೆ - ಅವನು ಹೇಳಿದಂತೆ ಇದ್ದರೆ, ಇಲ್ಲದಿದ್ದರೆ ಅದು ಹೇಳಿದವನ ಮೇಲೆಯೇ ಮರಳುತ್ತದೆ

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾವುದೇ ವ್ಯಕ್ತಿಯು ತನ್ನ ಸಹೋದರನಿಗೆ 'ಓ ಕಾಫಿರ್ (ಸತ್ಯನಿಷೇಧಿ)' ಎಂದು ಹೇಳಿದರೆ, ಅವರಲ್ಲಿ ಒಬ್ಬನು ಆ ಮಾತಿಗೆ ಅರ್ಹನಾಗುತ್ತಾನೆ - ಅವನು ಹೇಳಿದಂತೆ ಇದ್ದರೆ, ಇಲ್ಲದಿದ್ದರೆ ಅದು ಹೇಳಿದವನ ಮೇಲೆಯೇ ಮರಳುತ್ತದೆ."

[صحيح] [متفق عليه]

الشرح

ಒಬ್ಬ ಮುಸ್ಲಿಮನು ತನ್ನ ಸಹೋದರನಾದ ಇನ್ನೊಬ್ಬ ಮುಸ್ಲಿಮನಿಗೆ "ಓ ಕಾಫಿರ್" ಎಂದು ಹೇಳುವುದರ ವಿರುದ್ಧ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಕೆ ನೀಡಿದ್ದಾರೆ. ಏಕೆಂದರೆ, ಹಾಗೆ ಹೇಳಿದರೆ ಅವನು ಹೇಳಿದ್ದು ಸರಿಯಾಗಿದ್ದರೆ ಕಾಫಿರ್ (ಸತ್ಯನಿಷೇಧಿ) ಎಂಬ ಪದಕ್ಕೆ ಅವರಲ್ಲಿ ಒಬ್ಬನು ಅರ್ಹನಾಗುತ್ತಾನೆ -. ಇಲ್ಲದಿದ್ದರೆ ತನ್ನ ಸಹೋದರನನ್ನು ಕಾಫಿರ್ ಎಂದು ಕರೆದ ಆ ಪದವು ಹೇಳಿದವನಿಗೆ ಮರಳುತ್ತದೆ.

فوائد الحديث

ಒಬ್ಬ ಮುಸ್ಲಿಮನು ತನ್ನ ಸಹೋದರನಾದ ಇನ್ನೊಬ್ಬ ಮುಸ್ಲಿಮನಲ್ಲಿ ಇಲ್ಲದಂತಹ ದುಷ್ಕೃತ್ಯ ಮತ್ತು ಸತ್ಯನಿಷೇಧದ ಗುಣಗಳನ್ನು ಅವನಿಗೆ ಆರೋಪಿಸುವುದನ್ನು ಆಕ್ಷೇಪಿಸಲಾಗಿದೆ.

ಈ ಕೆಟ್ಟ ಮಾತಿನ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ತನ್ನ ಸಹೋದರನಿಗೆ ಅದನ್ನು ಹೇಳಿದವನು ದೊಡ್ಡ ಅಪಾಯದಲ್ಲಿರುತ್ತಾನೆ. ಆದ್ದರಿಂದ ನಾಲಿಗೆಯನ್ನು ಹದ್ದುಬಸ್ತಿನಲ್ಲಿಡುವುದು ಮತ್ತು ತಿಳಿವಳಿಕೆ ಇಲ್ಲದೆ ಮಾತನಾಡದಿರುವುದು ಅಗತ್ಯವಾಗಿದೆ.

التصنيفات

ಇಸ್ಲಾಮ್, Manners of Speaking and Keeping Silent