Reported Supplications

Reported Supplications

3- ಓ ನನ್ನ ಪರಿಪಾಲಕನೇ! ನನ್ನ ಪಾಪಗಳನ್ನು, ಅವಿವೇಕತನವನ್ನು, ನನ್ನ ಎಲ್ಲಾ ಕೆಲಸ-ಕಾರ್ಯಗಳಲ್ಲಿರುವ ಅಪರಿಮಿತಿಯನ್ನು ಮತ್ತು ನನ್ನ ಬಗ್ಗೆ ನೀನು ನನಗಿಂತ ಹೆಚ್ಚು ತಿಳಿದಿರುವುದೆಲ್ಲವನ್ನೂ ಕ್ಷಮಿಸು. ಓ ಅಲ್ಲಾಹ್! ನನ್ನ ತಪ್ಪುಗಳನ್ನು, ಉದ್ದೇಶಪೂರ್ವಕವಾಗಿ ಮಾಡಿದ್ದನ್ನು, ಅವಿವೇಕತನದಿಂದ ಮಾಡಿದ್ದನ್ನು, ತಮಾಷೆಗಾಗಿ ಮಾಡಿದ್ದನ್ನು ಮತ್ತು ನನ್ನಲ್ಲಿರುವ ಎಲ್ಲಾ ಪಾಪಗಳನ್ನೂ ಕ್ಷಮಿಸು. ಓ ಅಲ್ಲಾಹ್! ನಾನು ಮುಂದಕ್ಕೆ ಕಳುಹಿಸಿರುವ, ಹಿಂದೆ ಬಿಟ್ಟಿರುವ, ಬಹಿರಂಗಪಡಿಸಿರುವ ಮತ್ತು ರಹಸ್ಯವಾಗಿ ಮಾಡಿರುವ ಪಾಪಗಳನ್ನು ಕ್ಷಮಿಸು. ನೀನೇ ಮುಂದಕ್ಕೆ ತರುವವನು ಮತ್ತು ಹಿಂದಕ್ಕೆ ತಳ್ಳುವವನು. ನೀನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು

10- “ಹೇಳು: ‘ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಅಲ್ಲಾಹು ಅತ್ಯಂತ ಮಹಾನನು ಮತ್ತು ಸರ್ವೋನ್ನತನು, ಸರ್ವಸ್ತುತಿಗಳು ಹೇರಳವಾಗಿ ಅಲ್ಲಾಹನಿಗೆ, ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಪರಿಶುದ್ಧನಾಗಿದ್ದಾನೆ. ಪ್ರಚಂಡ ಶಕ್ತಿಶಾಲಿ ಮತ್ತು ಪರಮ ಜ್ಞಾನಿಯಾದ ಅಲ್ಲಾಹನ ಹೊರತು ಬೇರೆ ಶಕ್ತಿ ಅಥವಾ ಸಾಮರ್ಥ್ಯವಿಲ್ಲ.’”