Jurisprudence of Supplications and Remembrance of Allah

Jurisprudence of Supplications and Remembrance of Allah

19- ಓ ನನ್ನ ಪರಿಪಾಲಕನೇ! ನನ್ನ ಪಾಪಗಳನ್ನು, ಅವಿವೇಕತನವನ್ನು, ನನ್ನ ಎಲ್ಲಾ ಕೆಲಸ-ಕಾರ್ಯಗಳಲ್ಲಿರುವ ಅಪರಿಮಿತಿಯನ್ನು ಮತ್ತು ನನ್ನ ಬಗ್ಗೆ ನೀನು ನನಗಿಂತ ಹೆಚ್ಚು ತಿಳಿದಿರುವುದೆಲ್ಲವನ್ನೂ ಕ್ಷಮಿಸು. ಓ ಅಲ್ಲಾಹ್! ನನ್ನ ತಪ್ಪುಗಳನ್ನು, ಉದ್ದೇಶಪೂರ್ವಕವಾಗಿ ಮಾಡಿದ್ದನ್ನು, ಅವಿವೇಕತನದಿಂದ ಮಾಡಿದ್ದನ್ನು, ತಮಾಷೆಗಾಗಿ ಮಾಡಿದ್ದನ್ನು ಮತ್ತು ನನ್ನಲ್ಲಿರುವ ಎಲ್ಲಾ ಪಾಪಗಳನ್ನೂ ಕ್ಷಮಿಸು. ಓ ಅಲ್ಲಾಹ್! ನಾನು ಮುಂದಕ್ಕೆ ಕಳುಹಿಸಿರುವ, ಹಿಂದೆ ಬಿಟ್ಟಿರುವ, ಬಹಿರಂಗಪಡಿಸಿರುವ ಮತ್ತು ರಹಸ್ಯವಾಗಿ ಮಾಡಿರುವ ಪಾಪಗಳನ್ನು ಕ್ಷಮಿಸು. ನೀನೇ ಮುಂದಕ್ಕೆ ತರುವವನು ಮತ್ತು ಹಿಂದಕ್ಕೆ ತಳ್ಳುವವನು. ನೀನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು

31- “ಹೇಳು: ‘ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಅಲ್ಲಾಹು ಅತ್ಯಂತ ಮಹಾನನು ಮತ್ತು ಸರ್ವೋನ್ನತನು, ಸರ್ವಸ್ತುತಿಗಳು ಹೇರಳವಾಗಿ ಅಲ್ಲಾಹನಿಗೆ, ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಪರಿಶುದ್ಧನಾಗಿದ್ದಾನೆ. ಪ್ರಚಂಡ ಶಕ್ತಿಶಾಲಿ ಮತ್ತು ಪರಮ ಜ್ಞಾನಿಯಾದ ಅಲ್ಲಾಹನ ಹೊರತು ಬೇರೆ ಶಕ್ತಿ ಅಥವಾ ಸಾಮರ್ಥ್ಯವಿಲ್ಲ.’”

33- ಶೈತಾನನು ನಿಮ್ಮಲ್ಲೊಬ್ಬನ ಬಳಿಗೆ ಬಂದು ಕೇಳುತ್ತಾನೆ: "ಇದನ್ನು ಸೃಷ್ಟಿಸಿದ್ದು ಯಾರು? ಇದನ್ನು ಸೃಷ್ಟಿಸಿದ್ದು ಯಾರು?" ಹೀಗೆ ಅವನು "ನಿನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಸೃಷ್ಟಿಸಿದ್ದು ಯಾರು?" ಎಂದು ಕೇಳುವ ತನಕ ಮುಂದುವರಿಯುತ್ತಾನೆ. ಯಾರಿಗಾದರೂ ಇಂತಹ ಅನುಭವವಾದರೆ ಅವನು ಅಲ್ಲಾಹನಲ್ಲಿ ಅಭಯ ಯಾಚಿಸಿ ಅಲ್ಲಿಯೇ ನಿಂತುಬಿಡಲಿ

37- ಯಾವುದೇ ಮುಸ್ಲಿಂ ಅಲ್ಲಾಹನಲ್ಲಿ ಪಾಪ ಅಥವಾ ರಕ್ತ ಸಂಬಂಧವನ್ನು ಮುರಿಯುವುದನ್ನು ಒಳಗೊಂಡಿರದ ಪ್ರಾರ್ಥನೆಯೊಂದಿಗೆ ಪ್ರಾರ್ಥಿಸಿದರೆ, ಅಲ್ಲಾಹು ಅವನಿಗೆ ಮೂರರಲ್ಲಿ ಒಂದನ್ನು ನೀಡದೇ ಇರುವುದಿಲ್ಲ: ಒಂದೋ ಅವನ ಪ್ರಾರ್ಥನೆಗೆ ಶೀಘ್ರದಲ್ಲೇ ಉತ್ತರಿಸುತ್ತಾನೆ, ಅಥವಾ ಅವನು ಅದನ್ನು ಪರಲೋಕದಲ್ಲಿ ಅವನಿಗಾಗಿ ಉಳಿಸುತ್ತಾನೆ, ಅಥವಾ ಅವನು ಅದಕ್ಕೆ ಸಮಾನವಾದ ಒಂದು ಕೆಡುಕನ್ನು ಅವನಿಂದ ನಿವಾರಿಸುತ್ತಾನೆ." ಸಹಚರರು ಹೇಳಿದರು: "ಹಾಗಾದರೆ ನಾವು ಹೆಚ್ಚಿಸಬೇಕು." ಪ್ರವಾದಿಯವರು ಹೇಳಿದರು: "ಅಲ್ಲಾಹು ಕೂಡ ಹೆಚ್ಚಿಸುವನು