ಫಿಕ್ಹ್ ಮತ್ತು ಉಸುಲ್-ಎ-ಫಿಖ್ - الصفحة 4

ಫಿಕ್ಹ್ ಮತ್ತು ಉಸುಲ್-ಎ-ಫಿಖ್ - الصفحة 4

14- ಅಲ್ಲಾಹು ನಿಮಗೆ ದಾನವಾಗಿ ನೀಡಲು ಸಾಧ್ಯವಾಗುವಂತಹದ್ದನ್ನು ಒದಗಿಸಿಲ್ಲವೇ? ಪ್ರತಿ ತಸ್ಬೀಹ್ (ಸುಬ್‌ಹಾನಲ್ಲಾಹ್ ಎಂದು ಹೇಳುವುದು) ದಾನವಾಗಿದೆ; ಪ್ರತಿ ತಕ್ಬೀರ್ (ಅಲ್ಲಾಹು ಅಕ್ಬರ್ ಎಂದು ಹೇಳುವುದು) ದಾನವಾಗಿದೆ; ಪ್ರತಿ ತಹ್ಮೀದ್ (ಅಲ್‌ಹಮ್ದುಲಿಲ್ಲಾಹ್ ಎಂದು ಹೇಳುವುದು) ದಾನವಾಗಿದೆ; ಮತ್ತು ಪ್ರತಿ ತಹ್ಲೀಲ್ (ಲಾ ಇಲಾಹ ಇಲ್ಲಲ್ಲಾಹ್ ಎಂದು ಹೇಳುವುದು) ದಾನವಾಗಿದೆ. ಒಳಿತನ್ನು ಆದೇಶಿಸುವುದು ದಾನವಾಗಿದೆ, ಕೆಡುಕನ್ನು ತಡೆಯುವುದು ದಾನವಾಗಿದೆ, ಮತ್ತು ನಿಮ್ಮಲ್ಲಿ ಒಬ್ಬರು ಲೈಂಗಿಕ ಬಯಕೆಯನ್ನು ಪೂರೈಸುವುದರಲ್ಲಿ ಸಹ ದಾನವಿದೆ

17- ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) "ಅಲ್ಲಾಹನ ಸಹಾಯ ಮತ್ತು ವಿಜಯ ಬಂದಾಗ." [ಸೂರ ನಸ್ರ್: 1] ಎಂಬ ವಚನವು ಅವತೀರ್ಣವಾದ ಬಳಿಕ ಅವರು ಯಾವುದೇ ನಮಾಝ್ ಮಾಡಿದರೂ ಅದರಲ್ಲಿ "ಸುಬ್‌ಹಾನಕ ರಬ್ಬನಾ ವಬಿಹಮ್ದಿಕ್, ಅಲ್ಲಾಹುಮ್ಮಗ್‌ಫಿರ್ ಲೀ (ನಮ್ಮ ಪರಿಪಾಲಕನೇ, ನೀನು ಪರಮ ಪವಿತ್ರನು. ಸ್ತುತಿಗಳೆಲ್ಲವೂ ನಿನಗೆ ಸಲ್ಲುತ್ತದೆ. ಓ ಅಲ್ಲಾಹ್, ನನ್ನನ್ನು ಕ್ಷಮಿಸು) ಎಂದು ಹೇಳದೇ ಇರುತ್ತಿರಲಿಲ್ಲ